This is the title of the web page
This is the title of the web page

Please assign a menu to the primary menu location under menu

State

ಕಾಂಗ್ರೆಸ್ ಮುಖಂಡರು ಗುಂಪು ಕಟ್ಟಿಕೊಂಡು ರಿಜಿಸ್ಟರ್ ಕಚೇರಿ ಗೆ ನುಗ್ಗಿದ್ದು ಹಲವಾರು ಅನುಮಾನ ಗಳು!! ಶಾಸಕರಗಳು,ಆಡಳಿತ ವಿಫಲವೇ!!

ಕಾಂಗ್ರೆಸ್ ಮುಖಂಡರು ಗುಂಪು ಕಟ್ಟಿಕೊಂಡು ರಿಜಿಸ್ಟರ್ ಕಚೇರಿ ಗೆ ನುಗ್ಗಿದ್ದು ಹಲವಾರು ಅನುಮಾನ ಗಳು!! ಶಾಸಕರಗಳು,ಆಡಳಿತ ವಿಫಲವೇ!!

ಕಾಂಗ್ರೆಸ್ ಮುಖಂಡರು ಗುಂಪು ಕಟ್ಟಿಕೊಂಡು ರಿಜಿಸ್ಟರ್ ಕಚೇರಿ ಗೆ ನುಗ್ಗಿದ್ದು ಹಲವಾರು ಅನುಮಾನ ಗಳು!!
ಶಾಸಕರಗಳು,ಆಡಳಿತ ವಿಫಲವೇ!!

ಬಳ್ಳಾರಿ (25)ನಕಲಿ ದಾಖಲೆ ಸೃಷ್ಟಿಸಿ -5 ಕೋಟಿ ಮೌಲ್ಯದ ಜಮೀನು ಮಾರಾಟ ಆರೋಪ: ಸಬ್ ರಿಜಿಸ್ಟರ್ ಕಚೇರಿಗೆ ಮುತ್ತಿಗೆ.
ಕಾಂಗ್ರೆಸ್ ಮುಖಂಡರು ಗುಂಪು ಕಟ್ಟಿಕೊಂಡು ನುಗ್ಗಿದು ಹಲವಾರು ಅನುಮಾನ ಗಳು ಸೃಷ್ಟಿಸಿದೇ.

ನಕಲಿ ದಾಖಲೆಗಳನ್ನು ಸೃಷ್ಟಿಸಿ
ಸುಮಾರು ರೂ.5 ಕೋಟಿ ಮೌಲ್ಯದ ಏಳು ಎಕರೆ ಜಮೀನನ್ನು ಮಾಲೀಕರ ಗಮನಕ್ಕೆ ಬಾರದಂತೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ, ಸಂತ್ರಸ್ತರು ಹಾಗೂ ಬೆಂಬಲಿಗರು ಶುಕ್ರವಾರ ನಗರದ ಸಬ್ ರಿಜಿಸ್ಟರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕೊಳಗಲ್ ಮೂಲದ ನಾರಾಯಣಪ್ಪ ಅವರ ಪುತ್ರಿ ಸ್ವಪ್ನ ಅವರ ಹೆಸರಿನಲ್ಲಿರುವ ಕೊಳಗಲ್ ಗ್ರಾಮದ ಏಳು ಎಕರೆ ಜಮೀನನ್ನು ಕಳೆದ ಆರು ತಿಂಗಳ ಅವಧಿಯಲ್ಲಿ ಪ್ರತ್ಯೇಕವಾಗಿ ಇಬ್ಬರಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ನಾರಾಯಣಪ್ಪ ಹಾಗೂ ಸ್ವಪ್ನ ಬೆಂಗಳೂರಿನಲ್ಲಿ ವಾಸವಾಗಿರುವ ಹಿನ್ನೆಲೆಯಲ್ಲಿ ಜಮೀನು ಮಾರಾಟವಾಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಸುಮಾರು 15 ದಿನಗಳ ಹಿಂದೆ ವಿಚಾರ ತಿಳಿದು ದಾಖಲೆಗಳನ್ನು ಪರಿಶೀಲಿಸಿದಾಗ, ತಮ್ಮ ಜಮೀನಿಗೆ ಸಂಬಂಧಿಸಿದಂತೆ ವಂಚನೆಯಿಂದ ನೋಂದಣಿ ಪ್ರಕ್ರಿಯೆ ನಡೆಸಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಈ ಕುರಿತು ಸಬ್ ರಿಜಿಸ್ಟ್ರಾರ್ ದೇವಣ್ಣ ಅವರನ್ನು ಪ್ರಶ್ನಿಸಿದಾಗ, ಸಮಸ್ಯೆಯನ್ನು ಸರಿಪಡಿಸುವುದಾಗಿ ಹೇಳಿ ಪ್ರಕರಣವನ್ನು ಇತ್ಯರ್ಥಪಡಿಸಲು ಪ್ರಯತ್ನಿಸಿದರು. ಆದರೆ ಯಾವುದೇ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ಶುಕ್ರವಾರ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್. ಅಂಜನೇಯಲು ಅವರೊಂದಿಗೆ ಸಬ್ ರಿಜಿಸ್ಟ್ರಾ‌ರ್ ಕಚೇರಿಗೆ ತೆರಳಿ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸಬ್ ರಿಜಿಸ್ಟರ್ ದೇವಣ್ಣ ಅವರನ್ನು ಸಂತ್ರಸ್ತರು ತರಾಟೆಗೆ ತೆಗೆದುಕೊಂಡು, ತಮ್ಮದಲ್ಲದ ಆಸ್ತಿಯ ನೋಂದಣಿ ಹೇಗೆ ನಡೆಯಿತು ಎಂಬುದಕ್ಕೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು. ಕಚೇರಿಯಲ್ಲಿ ಗಲಾಟೆ ಹೆಚ್ಚಾಗುತ್ತಿದ್ದಂತೆ ಜಿಲ್ಲಾ ನೋಂದಣಾಧಿಕಾರಿ ಮಾಬುನ್ನಿಸಾ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸುವ ಕುರಿತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ.

ಸಬ್ ರಿಜಿಸ್ಟರ್ ಕಚೇರಿಯಲ್ಲಿ ಈ ರೀತಿಯ ಪ್ರಕರಣಗಳು ಒಂದೇ ಘಟನೆಗೆ ಸೀಮಿತವಾಗಿಲ್ಲ. ತಿಂಗಳಿಗೆ ನಾಲ್ಕು ಐದು ಪ್ರಕರಣಗಳಲ್ಲಿ ದಾಖಲೆಗಳ ಅಕ್ರಮ ಹಾಗೂ ಆಸ್ತಿ ನೋಂದಣಿಗೆ ಸಂಬಂಧಿಸಿದ ದೂರುಗಳು ಕೇಳಿಬರುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇಂತಹ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಘಟನೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾ-ರಿಗಳ ಗಮನಕ್ಕೆ ತಂದು ದೂರು ಸಲ್ಲಿಸಲು ಸಂತ್ರಸ್ತರು ನಿರ್ಧರಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ ಮಾಡಿರುವ ಆರೋಪದ ಕುರಿತು ತನಿಖೆ ನಡೆಸಿ, ಜಮೀನಿನ ಮೂಲ ಮಾಲೀಕರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ಪಾತ್ರ ಸೇರಿದಂತೆ ದಾಖಲೆಗಳ ಸತ್ಯಾಸತ್ಯತೆಯನ್ನು ಸಮಗ್ರವಾಗಿ ಪರಿಶೀಲಿಸಬೇಕು. ಸಾರ್ವಜನಿಕರ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ದುರುಪಯೋಗಪಡಿ ಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತರು ಆಗ್ರಹಿಸಿದರು. ಆದರೇ ಸ್ವ ಪಕ್ಷದ ಅವರು, ಅವರ ಸರ್ಕಾರ ದಲ್ಲಿ, ಆಡಳಿತ ವೈಫಲ್ಯ ಗಳನ್ನು, ಬೆಳುಕುಗೆ ತಂದಿರೋದು,ಹಲವಾರು ಅನುಮಾನಗಳು ಹುಟ್ಟಿಸಿದೆ. ಇದು ನಗರ ಶಾಸಕ ಭರತ್ ರೆಡ್ಡಿ ಗೆ ಸೆಡ್ಡು ಹೊಡೆಯುವ ತಂತ್ರ ಅನ್ನುವ ಗುಸು ಗುಸು ಆಗಿದೆ,ಈ ಹಿಂದೆ ಬುಡಾದಲ್ಲಿ ಆಗಿರವ ಅವ್ಯವಹಾರ ಗಳ ಬಗ್ಗೆ ಭರತ್ ರೆಡ್ಡಿ, ಸಮರ ಸಾರಿ, ರಾಜ್ಯ ಮಟ್ಟದಲ್ಲಿ, ಸುದ್ದಿ ಆಗಿತ್ತು. ಆದರೇ ಅದೇ ದಾರಿಯಲ್ಲಿ ಆಂಜನೇಯಲು, ನೇರವಾಗಿ ತಮ್ಮ ಸಮಾಜದ ಮುಖಂಡರು ಜೊತೆ, ಕಚೇರಿಗೆ ನುಗ್ಗಿ ಗಲಾಟೆ ಮಾಡಿದ್ದು, ರಾಜಕೀಯ ದಲ್ಲಿ ಕುತೂಹಲ ಮೂಡಿಸಿದೆ!!. >ಮುಂಬರುವ
ಚುನಾವಣೆ ಲೆಕ್ಕಾಚಾರ ಹಾಕಿ ಕೊಂಡು, ಇಬ್ಬರು ಶಾಸಕರು ಇದ್ದು, ಅವರ ಗಮನಕ್ಕೆ ಇಲ್ಲದೆ, ಪ್ರಜಾ ಸೇವಾ ಕಾರ್ಯಕ್ರಮ ಇದ್ದು, ಅಲ್ಲಿ ಹೇಳದೆ ಕಚೇರಿ ಗೆ ನುಗ್ಗಿದ್ದು, ಸಾರ್ವಜನಿಕರಲ್ಲಿ ಶಾಸಕರು ಗಳುಗೆ ಸೆಡ್ಡು ಹೊಡೆದು, ಬುಡಾ ಅಧ್ಯಕ್ಷರ, ಕೆಲ ಮುಖಂಡರು, ಶಾಸಕರು ಮೇಲೆ ದೊಡ್ಡ ಅವರು ಅನ್ನುವ ಸಂದೇಶ ರವಾನೆ ಆಗಿದೆ,ಶಾಸಕರು ಜಿಲ್ಲೆ ನಲ್ಲಿ ಡಮ್ಮಿ ಆಗಿದ್ದಾರೆ ಅನ್ನುವ ಮೆಸೇಜ್ ರವಾನೆ ಆಗಿದೆ, ಜಿಲ್ಲಾ ಆಡಳಿತ ಸಂಪೂರ್ಣ ವಿಫಲ ಆಗಿದೆ ಅನ್ನುವ, ಸಂದೇಶ ಹೋಗಿದೆ.ಆಡಳಿತ ಪಕ್ಷದ ಮುಖಂಡರು ಹೋರಾಟ ಮಾಡಿದರೆ, ವಿರೋಧ ಪಕ್ಷದ ಅವರು ಇನ್ನು ಏನು ಮಾಡಬಹುದು..??


News 9 Today

Leave a Reply