ಜೋಳ ಖರೀದಿ ಕೇಂದ್ರದ ಮೇಲೆ ದಾಳಿ ಎರಡು ಲಾರಿ ಸಾವಿರ ಚೀಲ ಜೋಳ ಸೀಜ್ ಮಾಡಿದ ಅಸಿಸ್ಟೆಂಟ್ ಕಮಿಷನರ್. ರಾಜೇಶ್ ಹೆಚ್.ಡಿ. 
ಬಳ್ಳಾರಿ(23) ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಅಸುಂಡಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಮರಾಪುರ. ಅಸುಂಡಿ ಗ್ರಾಮ ದಲ್ಲಿ ಸರ್ಕಾರ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರಾಗಿ, ತೋಗರಿ,ಜೋಳ, ಖರೀದಿ ಮಾಡಲು ಕೇಂದ್ರವನ್ನು ಮಾಡಲಾಗತ್ತು. ಆದರೇ ಈ ಜೋಳ ಖರೀದಿ ಕೇಂದ್ರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎನ್ನುವ ಸುಳಿವು ಸಿಕ್ಕಿತ್ತು. ಅಪಾರ ಜಿಲ್ಲಾ
ಧಿಕಾರಿಗಳು ಸೂಚನೆಯಂತೆ ಅಸಿಸ್ಟೆಂಟ್ ಕಮಿಷನರ್, ಹೆಚ್.ಡಿ ರಾಜೇಶ್ ಅವರು ಮಂಗಳವಾರ ಬೆಳ್ಳಂಬೆಳಗ್ಗೆ ಅಸುಂಡಿ ಜೋಳ ಖರೀದಿ ಕೇಂದ್ರದ ಮೇಲೆ ತಹಶೀಲ್ದಾರ್ ರೇಖಾ ಸೇರಿಕೊಂಡು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಒಂದು ಆಂಧ್ರ ಪ್ರದೇಶ್ ಗುಂಟೂರ್ ದಿಂದ ಬಂದಿರುವ ಲಾರಿ ಮತ್ತೊಂದು ಆಂಧ್ರ ಮೂಲದ ಲಾರಿ ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತುಂಬಿರುವ ಲಾರಿ ಎಂದು ಮಾಹಿತಿ ಪಡೆದ ಏ ಸಿ ಯವರು ಎರಡು ಲಾರಿಗಳನ್ನು ಮತ್ತು ಒಂದು ಸಾವಿರ ಚೀಲ ಜೋಳವನ್ನು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿ ಸೀಜ್ ಮಾಡಿದ್ದಾರೆ. ನಕಲಿ ಸೃಷ್ಟಿ ಮಾಡಿಕೊಂಡು ಇದೇ ಭಾಗದ ರೈತರ ಜೋಳ ಅನ್ನುವ ಮೊಸದ ದಂದೆ ಮಾಡುತ್ತಾ ಕಡಿಮೆ ದರದಲ್ಲಿ ಕಳಿಪೆ ತಿನ್ನಲು ಯೋಗ್ಯ ಇಲ್ಲದ ಜೋಳ ಸರ್ಕಾರಕ್ಕೆ ಹಾಕಿ ಹಣಗಳಿಸುವ ವಂಚಕರ ಜಾಲ ಹಿಡಿದು ಕೊಂಡಿದ್ದಾರೆ ಇನ್ನಷ್ಟು ಪೂರ್ತಿ ಮಾಹಿತಿ ಸಿಗಬೇಕಾಗಿದೆ..














