This is the title of the web page
This is the title of the web page

Please assign a menu to the primary menu location under menu

State

ಲೇಔಟುಗಳು ಬಡಾವಣೆಗಳು ಬೇಸಾಯವನ್ನು ಕಸಿದು ಕೊಳ್ಳುತ್ತಿವೆ. ಇವುಗಳಿಗೆ ಅನುಮತಿ ನೀಡುವ ಅಧಿಕಾರಿಗಳು ಸಗಣಿ ತಿನ್ನುತ್ತಿರುವೆ.??.

ಲೇಔಟುಗಳು ಬಡಾವಣೆಗಳು ಬೇಸಾಯವನ್ನು ಕಸಿದು ಕೊಳ್ಳುತ್ತಿವೆ. ಇವುಗಳಿಗೆ ಅನುಮತಿ ನೀಡುವ ಅಧಿಕಾರಿಗಳು ಸಗಣಿ ತಿನ್ನುತ್ತಿರುವೆ.??.

ಲೇಔಟುಗಳು ಬಡಾವಣೆಗಳು ಬೇಸಾಯವನ್ನು ಕಸಿದು ಕೊಳ್ಳುತ್ತಿವೆ. ಇವುಗಳಿಗೆ ಅನುಮತಿ ನೀಡುವ ಅಧಿಕಾರಿಗಳು ಸಗಣಿ ತಿನ್ನುತ್ತಿರುವೆ.??.

ಬಳ್ಳಾರಿ ನಗರದ ನೂರಾರು ಕಿಲೋಮೀಟರುಗಳ ವ್ಯಾಪ್ತಿಯಲ್ಲಿ ಬೇಸಾಯದ ಭೂಮಿಗಳು ಲೆಔಟ್ ಗಳಾಗಿ ಬಡಾವಣೆಗಳಾಗಿ ಪರಿವರ್ತನೆಗೊಂಡಿವೆ.

ದೊಡ್ಡ ಮಟ್ಟದಲ್ಲಿ ಹಣ ಸಿಗುತ್ತದೆ ಎನ್ನುವ ಆಸೆ ಮತ್ತು ರಿಯಲ್ ಎಸ್ಟೇಟ್ ನ ಮಾಫಿಯಾ ಅವರ ಕೈಯಲ್ಲಿ ಸಿಲುಕಿದ್ದಾರೆ ಇದರಿಂದ ಜಿಲ್ಲೆಯಲ್ಲಿ ನೂರಾರು ಕಿಲೋಮೀಟರ್ ಗಟ್ಟಲೇ ಬಡಾವಣೆ ಲೇಔಟ್ ಗಳು ಬರೆದುಕೊಂಡಿವೆ ಸಮರ್ಥವಾದ ಫಲಾವತ್ತಾ ವಾದ ಬೇಸಾಯದ ಭೂಮಿಗಳು ಕಳೆದು ಹೋಗಿವೆ ಮಾಯವಾಗಿ ಬಿಟ್ಟಿವೆ.

ಆದರೆ ಬಡಾವಣೆ, ಲೇಔಟ್ ನಿರ್ಮಾಣಗಳಿಗೆ, ಅನುಮತಿ ನೀಡುವ ಸಂಬಂಧಪಟ್ಟಿರುವ ಇಲಾಖೆಗಳು ಸಗಣಿಯನ್ನು ತಿನ್ನುತ್ತಿರಬಹುದೇ..??ಹಣ ಆಸೆಗೆ ಬಡಾವಣೆ ಲೇಔಟ್ ಗಳಿಗೆ ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಅನುಮತಿಗಳನ್ನು ನೀಡುತ್ತಿರುವುದು ಮಾರಕ ಅಪಾಯಮಟ್ಟಕ್ಕೆ ನಿಂತುಕೊಂಡಿದೆ.

ಈಗಾಗಲೇ ಅಷ್ಟೋ ಇಷ್ಟೋ ಉಳಿದುಕೊಂಡಿರುವ ಅದರ ಮೇಲೆ ಜೀವನ ನಡೆಸುತ್ತಿರುವ ಬೇಸಾಯ ರೈತರಿಗೆ ಸಂಕಷ್ಟವನ್ನು ತಂದು ತುಂಬಿಸಿದೆ.

ಲೇಔಟ್ ಗಳು ಫಲವತ್ತವಾದ ಬೇಸಾಯ ಮಾಡಿಕೊಳ್ಳುವ ಭೂಮಿಗೆ ನೀರು ಇಲ್ಲದೆ ಹರಿಯಲು ದಾರಿ ಇಲ್ಲದಂತೆ ಮಾಡಿದ್ದಾರೆ.

ಅನ್ನದಾತ ಕಣ್ಣೀರು ಸುರಿಸುವ ಕಷ್ಟಪಡುವ ಭಯಾನಕ ವಾತಾವರಣ ಬಳ್ಳಾರಿ ಜಿಲ್ಲೆಯಲ್ಲಿ ಹುಟ್ಟಿಕೊಂಡಿದೆ.

ಲೇಔಟ್ ಬಡಾವಣೆಗಳು ತಮ್ಮ ವ್ಯಾಪ್ತಿಯಲ್ಲಿರುವ ಪ್ರದೇಶಗಳಲ್ಲಿ ನಿರ್ಮಾಣ ಮಾಡಿಕೊಳ್ಳದೆ ಸರ್ಕಾರದ ರಸ್ತೆಗಳು ಬೇಸಾಯಕ್ಕೆ ಹರಿಯುತ್ತಿರುವ ಕಾಲುವೆ ಗಳನ್ನು ಒತ್ತುವರಿ ಮಾಡಿಕೊಂಡು ತಮ್ಮ ಬಡಾವಣೆ ಒಳಗಡೆ ಅವುಗಳನ್ನು ಸೇರಿಸಿಕೊಂಡು ನಿರ್ಮಾಣ ಮಾಡಿದ್ದಾರೆ ಎನ್ನುವುದು ಕಣ್ಣು ಮುಂದೆ ಕಾಣುತ್ತಿರುವ ಸಾಕ್ಷಿ ಎಂದರು ತಪ್ಪಾಗದು.

ಇದು ಅಲ್ಲದೆ ಇನ್ನು ಕೆಲವು ಭಾಗದಲ್ಲಿ ಉದಾಹರಣೆಗೆ ತಾಳೂರು ರಸ್ತೆಯಲ್ಲಿರುವ ಬಹುತೇಕ ಬಡಾವಣೆಗಳು ಲೇಔಟುಗಳು ಶಾಲೆಗಳು ಕಾಲೇಜುಗಳು ಸಂಪೂರ್ಣವಾಗಿ ಸರ್ಕಾರದ ಜಾಗವನ್ನು ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಿಕೊಂಡಿದ್ದಾರೆ. ಹಳ್ಳ ರಹಸ್ಯವನ್ನು ನುಂಗಿ ಹಾಕಿದ್ದಾರೆ ನಕೀಲಿ ನಕ್ಷೆ ಮಾಡಿ ಟೋಪಿ ಹಾಕಿದ್ದಾರೆ ಅನ್ನುತ್ತಾರೆ ಹಿರಿಯರು ಚೈತನ್ಯ ಕಾಲೇಜ್, ಇನ್ನೂ ಬೇರೆ ಅವರು ಕೂಡ ಸಂಪೂರ್ಣ ಇದೇ ಕೆಲಸ ಮಾಡಿದ್ದಾರೆ ಅನ್ನುತ್ತಾರೆ ಪಬ್ಲಿಕ್. ಈ ಭಾಗದಲ್ಲಿ ಒಂದಿಷ್ಟು ಭಾಗ ಬೇಸಾಯದ ಭೂಮಿ ಇದ್ದು ಈಗಾಗಲೇ ಬರಗಾಲ ಆವರಿಸಿಕೊಂಡಿದ್ದು ದೇವರ ಮೇಲೆ ನಂಬಿಕೆ ಇಟ್ಟುಕೊಂಡು ದುಬಾರಿ ಬೆಲೆಯ ಬೀಜ ರಸಗೊಬ್ಬರ ದುಪ್ಪಟ್ಟುನ ಗುತ್ತಿಗೆ ಭೂಮಿಯಲ್ಲಿ ಸುರಿಯಲಾಗಿದ್ದು ಮಳೆ ಇಲ್ಲದೇ ಸರಿಯಾಗಿ ಮೊಳಕೆ ಬರದೆ ತುಂಗಭದ್ರಾ ನದಿ ನೀರಿದಿಂದಲೇ ಬೇಸಾಯ ಮಾಡಿಕೊಳ್ಳುವ ರೈತರಿಗೆ ಬಹುದೊಡ್ಡ ಸಂಕಷ್ಟ ಎದರಾಗಿದೆ ಏನೋ ಮಾಡಿ ಬೆಳೆಯುತ್ತದೆ ಎನ್ನುವ ನಂಬಿಕೆಯಿಂದ ಹಗಲು ರಾತ್ರಿ ಹಾವು ಚೇಳು ಅಪಾಯ ಅನ್ನುವುದನ್ನು ಮರೆತು ನೀರು ಹರಿಸಲು ಹೋದ ರೈತರಿಗೆ ಬಡಾವಣೆ ಲೇಔಟ್ ಗಳು ಸರ್ಕಾರದ ಜಾಗದಲ್ಲಿ ಪೈಪುಗಳನ್ನು ಹಾಕಿ ನೀರು ಹರಿಯಲು ಮಾಡಿದ್ದು ಅದರಿಂದ ರೈತರಿಗೆ ಬೇಸಾಯಗೆ ನೀರು ಹರಿಯದೆ ಪೈಪುಗಳ ಮುಖಾಂತರ ನೀರು ತಲುಪಿಸಲು ಆಗದೇ ಇದರ ಮಧ್ಯದಲ್ಲಿ ಗಿಡ ಮರಗಳು ಬೆಳೆದು ಪೈಪುಗಳು ಸಂಪೂರ್ಣ ಬ್ಲಾಕ್ ಆಗಿರುವ ವಾತಾವರಣ ಸೃಷ್ಟಿ ಆಗಿದ್ದು ರೈತರ ಚಿಂತೆಗೆ ಗುರಿಯಾಗಿದ್ದಾನೆ. ಬಳ್ಳಾರಿ ಜಿಲ್ಲೆ ನಲ್ಲಿ ನೇರ ದಿಟ್ಟ ಧೈರ್ಯ ಇರುವ ಜಿಲ್ಲಾಡಳಿತದಲ್ಲಿ ಅಪಾರ ಜಿಲ್ಲಾಧಿಕಾರಿಗಳು, ಜಿಲ್ಲಾಧಿಕಾರಿಗಳು ಈಗಾಗಲೇ ಸರ್ಕಾರದ ಸ್ಥಳಗಳ ಹೊತ್ತುವರಿ ಗಳನ್ನು ತೆರುವು ಮಾಡಿ ಚಳಿ ಬೇಡಿಸಿದ್ದಾರೆ. ಈಗಲಾದರೂ ಆಡಳಿತ ಅಧಿಕಾರಿಗಳು ಕ್ರಮ ಕೈಗೊಂಡು ನೀರು ಹರಿಯಲು ನಾಲೆ ರಸ್ತೆ ಬೇಸಾಯಕ್ಕೆ ಬಡಾವಣೆ ಅವರಿಂದಲೇ ಮಾಡಿಕೊಡಲು ಕ್ರಮವನ್ನು ಕೈ ಗೊಳ್ಳಬೇಕು ಹಳ್ಳ ಭಾಗದಲ್ಲಿ ಬಡಾವಣೆಗಳ ಹಳ್ಳಕ್ಕೆ ನೀರು ಬಾರದೆ ಅಲ್ಲಿನ ರೈತರ ಗೋಳು ನೋಡಬೇಕು.

ಸಗಿಣಿ ತಿಂದ ಅಧಿಕಾರಿಗಳು ವಿರುದ್ಧ ಪ್ರಕರಣ ದಾಖಲೆ ಮಾಡಬೇಕು. ಬಡಾವಣೆ ಲೆ ಔಟ್ ದಾರರ ವಿರುದ್ಧ ಕ್ರಮಜಾರಿಗಿಸಬೇಕು ಆಗಿದೆ.


News 9 Today

Leave a Reply