This is the title of the web page
This is the title of the web page

Please assign a menu to the primary menu location under menu

State

ಕಾಂಗ್ರೆಸ್ ನಾಯಕಿ ಜೊತೆ ಕಾಣಿಸಿಕೊಂಡ ಬಿಜೆಪಿ ಕಾರ್ಯಕರ್ತೆ, ಪಕ್ಷದಲ್ಲಿ ಶಿಸ್ತು ಇರಬೇಕು.ಉಜ್ವಲ ಶ್ರೀಧರ್ ನಡೆಗೆ ಪಕ್ಷದಲ್ಲಿ ಅಸಮಾಧಾನ? ಪ್ರತಿಭಟನಾ ಧರಣಿಯಿಂದ ಹೊರಹಾಕಿದ ಆರೋಪ

ಕಾಂಗ್ರೆಸ್ ನಾಯಕಿ ಜೊತೆ ಕಾಣಿಸಿಕೊಂಡ ಬಿಜೆಪಿ ಕಾರ್ಯಕರ್ತೆ, ಪಕ್ಷದಲ್ಲಿ ಶಿಸ್ತು ಇರಬೇಕು.ಉಜ್ವಲ ಶ್ರೀಧರ್ ನಡೆಗೆ ಪಕ್ಷದಲ್ಲಿ ಅಸಮಾಧಾನ? ಪ್ರತಿಭಟನಾ ಧರಣಿಯಿಂದ ಹೊರಹಾಕಿದ ಆರೋಪ

ಕಾಂಗ್ರೆಸ್ ನಾಯಕಿ ಜೊತೆ ಕಾಣಿಸಿಕೊಂಡ ಬಿಜೆಪಿ ಕಾರ್ಯಕರ್ತೆ, ಪಕ್ಷದಲ್ಲಿ ಶಿಸ್ತು ಇರಬೇಕು.ಉಜ್ವಲ ಶ್ರೀಧರ್ ನಡೆಗೆ ಪಕ್ಷದಲ್ಲಿ ಅಸಮಾಧಾನ?
ಪ್ರತಿಭಟನಾ ಧರಣಿಯಿಂದ ಹೊರಹಾಕಿದ ಆರೋಪ:

ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಿರ್ಧರಿಸುತ್ತೇವೆ’ ಎಂದ ಜಿಲ್ಲಾ ಅಧ್ಯಕ್ಷ

ಬಳ್ಳಾರಿ, ಆ.22: ಕಾಂಗ್ರೆಸ್ ನಾಯಕಿ ಹಾಗೂ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಪತ್ನಿ ವೈಜಯಂತಿ ರೆಡ್ಡಿ ಅವರೊಂದಿಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತೆ ಉಜ್ವಲ ಶ್ರೀಧರ್ ಅವರ ನಡೆ ಇದೀಗ ಬಳ್ಳಾರಿ ಬಿಜೆಪಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ನಾಯಕಿಯೊಂದಿಗೆ ವೇದಿಕೆ ಹಂಚಿಕೊಂಡಿರುವುದು ಪಕ್ಷದ ಶಿಸ್ತಿಗೆ ದಕ್ಕೆ ಅನ್ನುವ ಆರೋಪ.
ಬಿಜೆಪಿ ವಲಯದಲ್ಲಿ ವಿರೋಧದ ಆರಂಭವಾಗಿದೆ.

ನಗರ ಶಾಸಕ ನಾರಾ ಭರತ್ ರೆಡ್ಡಿ ಸ್ಥಾಪಿಸಿರುವ ಟಚ್ ಪಾಲೆಫ್ ಫೌಂಡೇಶನ್ ವತಿಯಿಂದ ನಕ್ಷತ್ರ ಹೋಟೆಲ್‌ನಲ್ಲಿ ಮಹಿಳಾ ಸಬಲೀಕರಣದ ಉದ್ದೇಶದಿಂದ ಆಯೋಜಿಸಿದ್ದ ‘ಸಂಪೂರ್ಣ ಸಿರಿ’ ಒಂದು ದಿನದ ಮೇಕಪ್ ಕಾರ್ಯಾಗಾರದಲ್ಲಿ ಶಾಸಕರ ಪತ್ನಿ ವೈಜಯಂತಿ ರೆಡ್ಡಿ ಅವರೊಂದಿಗೆ ಉಜ್ವಲ ಶ್ರೀಧರ್ ಭಾಗವಹಿಸಿದ್ದರು.

ಈ ಕಾರ್ಯಕ್ರಮದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಚರ್ಚೆ ತೀವ್ರಗೊಂಡಿದೆ ಎನ್ನಲಾಗಿದೆ.
ಇದರ ಬೆನ್ನಲ್ಲೇ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಉಜ್ವಲ ಶ್ರೀಧರ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಪ್ರತಿಭಟನಾ ಸ್ಥಳದಿಂದ ತೆರಳುವಂತೆ ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ. ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು ಸೂಚಿಸಿದ್ದಾರೆ ಎಂದು ಕೇಳಿ ಬಂದಿದೆ.
ಉಜ್ವಲ ಶ್ರೀಧರ್ ಈಗಾಗಲೇ ಎದ್ದು ಕೂಡಲೇ ನಾರಾ ಭರತ್ ರೆಡ್ಡಿ ಅವರ ಬಣದಲ್ಲಿ ಇರುತ್ತಾರೆ ಅನ್ನುವ ಆರೋಪ ಇದೇ. ಈಗಾಗಲೇ,14,ಕೋಟಿ ಕಾಮಗಾರಿ ಸಬ್ ಗುತ್ತಿಗೆ ಪಡೆದಿದ್ದಾರೆ ಅನ್ನೋದು ಕೂಡ ಕೇಳಿ ಬರುತ್ತಿದೆ.
ಬಿಜೆಪಿ ಮಹಿಳಾ ಕಾರ್ಯಕರ್ತರು ಕೂಡ ವಿರೋಧ ಮಾಡಿದ್ದಾರೆ, ಅಲ್ಲಿಂದ ತೆರಳಬೇಕಾದ ಅನಿವಾರ್ಯ ಆಗಿತ್ತು.

ಉಜ್ವಲ ಶ್ರೀಧರ್ ಈ ಹಿಂದೆ ಬಳ್ಳಾರಿ ಮಹಾನಗರ ಪಾಲಿಕೆಯ 34ನೇ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದರು.

ಬಳಿಕ ಜಿಲ್ಲಾ ಬಿಜೆಪಿಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಅವರು, ಪಕ್ಷದ ಸಕ್ರಿಯ ಕಾರ್ಯಕರ್ತೆಯಾಗಿ ಗುರುತಿಸಿಕೊಳ್ಳಲಿಲ್ಲ ಆಗೇ ಬರೋದು ಹೋಗೊದು ಮಾಡಿಕೊಂಡಿದ್ದರು.

ಆದರೆ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರಿಗೆ ಅದರಲ್ಲೂ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಬಣಕ್ಕೆ ಆಪ್ತವಾಗಿ ಕಾಣಿಸಿಕೊಳ್ಳುತ್ತಿರುವುದು ಪಕ್ಷದ ಕೆಲ ಮಹಿಳಾ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. “ಒಂದೆಡೆ ಬಿಜೆಪಿ ಧರಣಿಯಲ್ಲಿ ಕಾಣಿಸಿಕೊಳ್ಳುವುದು, ಮತ್ತೊಂದೆಡೆ ಕಾಂಗ್ರೆಸ್ ನಾಯಕಿಯೊಂದಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಗೊಂದಲಕ್ಕೆ ಕಾರಣವಾಗಿದೆ. ಪಕ್ಷದಲ್ಲಿ ಶಿಸ್ತು ಪಾಲಿಸುವ ಕಾರ್ಯಕರ್ತೆಯರು ಇದನ್ನು ಪ್ರಶ್ನಿಸುತ್ತಿದ್ದಾರೆ” ಎಂದು ಬಿಜೆಪಿ ವಲಯದ ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು ಮಾತನಾಡಿ, ಉಜ್ವಲ ಶ್ರೀಧರ್ ಅವರನ್ನು ಪಕ್ಷದಿಂದ ಹೊರಹಾಕುವ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅವರನ್ನು ಕರೆದು ಮಾತನಾಡಿ, ಅವರ ನಡೆ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗುವುದು. ಕಾಂಗ್ರೆಸ್ ನಾಯಕಿಯೊಂದಿಗೆ ಅವರು ಭಾಗವಹಿಸಿರುವ ಕಾರ್ಯಕ್ರಮದ ಸ್ವರೂಪ ಹಾಗೂ ಅದರಿಂದ ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆಯೇ ಎಂಬುದನ್ನು ಪರಿಶೀಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಮಾತನಾಡಿ, ಉಜ್ವಲ ಶ್ರೀಧರ್ ಅವರು ಯಾವುದೇ ಪಕ್ಷದ ಧ್ವಜ ಅಥವಾ ರಾಜಕೀಯ ಕಾರ್ಯಕ್ರಮವಿಲ್ಲದೆ ವೈಯಕ್ತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ ಅದನ್ನು ದೊಡ್ಡ ತಪ್ಪೆಂದು ಪರಿಗಣಿಸುವ ಅಗತ್ಯವಿಲ್ಲ.

ಆದರೆ ಪಕ್ಷದ ಕಾರ್ಯಕರ್ತರು ತಮ್ಮ ವೈಯಕ್ತಿಕ ಚಟುವಟಿಕೆಗಳಿಂದ ಪಕ್ಷದಲ್ಲಿ ಗೊಂದಲ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.
ಮತ್ತೊಂದೆಡೆ, ಉಜ್ವಲ ಶ್ರೀಧರ್ ಅವರ ಹಿಂದೆ ಪಕ್ಷದ ಕೆಲ ಪ್ರಮುಖ ನಾಯಕರ ಹೆಸರುಗಳನ್ನು ಬಳಸಿಕೊಂಡು ಬಿಜೆಪಿ ನಾಯಕರಗಳ ನಡುವೆ ಗೊಂದಲ ಸೃಷ್ಟಿಸಲಾಗುತ್ತಿದೆ ಎಂಬ ಆರೋಪವೂ ಕೆಲ ಕಾರ್ಯಕರ್ತರಿಂದ ಕೇಳಿಬರುತ್ತಿದೆ. ಪಕ್ಷದೊಳಗಿನ ಗುಂಪುಗಾರಿಕೆ ಹಾಗೂ ವೈಯಕ್ತಿಕ ರಾಜಕೀಯಕ್ಕೆ ಇದು ಕಾರಣವಾಗಬಾರದು ಎಂಬ ಮಾತುಗಳು ಕೇಳಿಬರುತ್ತಿವೆ.
“ಎರಡು ದೋಣಿಗಳ ಮೇಲೆ ಕಾಲಿಡುವಂತಹ ರಾಜಕೀಯ ನಡೆ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತದೆ.

ಬಿಜೆಪಿ ವೇದಿಕೆಯಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡು, ಮತ್ತೊಂದೆಡೆ ಕಾಂಗ್ರೆಸ್ ನಾಯಕರ ಕುಟುಂಬದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು ಸಮಂಜಸವೇ?” ಎಂಬ ಪ್ರಶ್ನೆಯನ್ನು ಕೆಲ ಬಿಜೆಪಿ ಮಹಿಳಾ ಕಾರ್ಯಕರ್ತರು ಎತ್ತಿದ್ದಾರೆ.
ಉಜ್ವಲ ಶ್ರೀಧರ್ ಅವರನ್ನು ಧರಣಿ ಸ್ಥಳದಿಂದ ತೆರಳುವಂತೆ ಸೂಚಿಸಿರುವ ಘಟನೆ ಇದೀಗ ಬಿಜೆಪಿ ಒಳವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ನಾಯಕತ್ವ ಈ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ. ಬಿಜೆಪಿಯ ‘ಉಜ್ವಲ ಭವಿಷ್ಯ’ದ ಮೇಲೆ ಈ ವಿವಾದದ ನೆರಳು ಬೀಳಲಿದೆಯೇ? ಎಂಬ ಪ್ರಶ್ನೆ ಇದೀಗ ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ. ಇವರು ಏನು ಬಹು ದೊಡ್ಡ ನಾಯಕಿ ಅಲ್ಲ, ಆದರೇ ಕೆಲವರು ಹೆಸರು ಹೇಳಿ ಕೊಂಡು ರಾಜಕೀಯ ಮಾಡುತ್ತಾರೆ. ಗೊಂದಲ ಸೃಷ್ಟಿ ಆಗಬಾರದು ಅನ್ನುವ ಯೋಚನೆ ಪಕ್ಷದ ಆಲೋಚನೆ ಆಗಿದೆ. ಆರಂಭದಲ್ಲಿ ಕಡಿವಾಣ ಹಾಕಬೇಕು ಇಲ್ಲ ಅಂದ್ರೆ ಮತ್ತೊಂದು ಮೆಸೇಜ್ ಹೋಗುತ್ತೆ ಅನ್ನುತ್ತಾರೆ ಕಾರ್ಯಕರ್ತರು

.


News 9 Today

Leave a Reply