This is the title of the web page
This is the title of the web page

Please assign a menu to the primary menu location under menu

State

ಬಳ್ಳಾರಿಯಲ್ಲಿ ವೇಶ್ಯಾವಾಟಿಕೆ ಜಾಲ ಪತ್ತೆ: ಬಾಲಕಿರ ಯನ್ನು ಬಳಸಿಕೊಂಡು ರಾಜ್ಯಾಂತರ ದಂಧೆ ನಡೆಸುತ್ತಿದ್ದ ತಂಡದ ವಿರುದ್ಧ ಪೊಲೀಸರ ಕಾರ್ಯಾಚರಣೆ

ಬಳ್ಳಾರಿಯಲ್ಲಿ ವೇಶ್ಯಾವಾಟಿಕೆ ಜಾಲ ಪತ್ತೆ: ಬಾಲಕಿರ ಯನ್ನು ಬಳಸಿಕೊಂಡು ರಾಜ್ಯಾಂತರ ದಂಧೆ ನಡೆಸುತ್ತಿದ್ದ ತಂಡದ ವಿರುದ್ಧ ಪೊಲೀಸರ ಕಾರ್ಯಾಚರಣೆ

ಬಳ್ಳಾರಿಯಲ್ಲಿ ವೇಶ್ಯಾವಾಟಿಕೆ ಜಾಲ ಪತ್ತೆ: ಬಾಲಕಿರ ಯನ್ನು ಬಳಸಿಕೊಂಡು ರಾಜ್ಯಾಂತರ ದಂಧೆ ನಡೆಸುತ್ತಿದ್ದ ತಂಡದ ವಿರುದ್ಧ ಪೊಲೀಸರ ಕಾರ್ಯಾಚರಣೆ.

ಬಳ್ಳಾರಿ(12) ಉದ್ಯೋಗ ಹಾಗೂ ಹಣದ ಆಮಿಷವೊಡ್ಡಿ ಮಹಿಳೆಯರನ್ನು ವಂಚಿಸಿ, ಅವರ ಅಶ್ಲೀಲ ಫೋಟೋ ವಿಡಿಯೋಗಳನ್ನು ಚಿತ್ರೀಕರಿಸಿ, ಬಳಿಕ ಬ್ಲ್ಯಾಕ್‌ಮೇಲ್ ಮೂಲಕ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶದ ವಿವಿಧ ಪ್ರದೇಶಗಳಲ್ಲಿ ವೇಶ್ಯಾವಾಟಿಕೆ ದಂಧೆಗೆ ತಳ್ಳುತ್ತಿದ್ದ ಜಾಲವೊಂದನ್ನು ಬಳ್ಳಾರಿ ಪೊಲೀಸರು ಪತ್ತೆಹಚ್ಚಿದ್ದಾರೆ.

ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ ಎಂದು ತಿಳಿದುಬಂದಿದೆ.

ಈ ಜಾಲದಲ್ಲಿ ಅಪ್ರಾಪ್ತ ಬಾಲಕಿಯಾರನ್ನು ಬಳಸಿಕೊಂಡು, ಇತರ ಮಹಿಳೆಯರನ್ನು ಸೆಳೆಯುವ ಹಾಗೂ ಅವರನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳುವ ಪ್ರಯತ್ನ ನಡೆದಿರುವುದು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು 12ಕ್ಕೂ ಹೆಚ್ಚು ಮಂದಿ ಈ ಜಾಲದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

2026ರ ನವೆಂಬರ್ 9ರಂದು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಜಾಡು ಹಿಡಿದು ಕೆಲವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ಹಲವರನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಈ ಜಾಲದ ಹಿಂದೆ ಇರುವ ಇತರ ವ್ಯಕ್ತಿಗಳ ಪಾತ್ರ ಹಾಗೂ ರಾಜ್ಯಾಂತರ ಸಂಪರ್ಕಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.

ಮಹಿಳೆಯರು ಮತ್ತು ಅಪ್ರಾಪ್ತರನ್ನು ಆಮಿಷವೊಡ್ಡಿ ವಂಚಿಸುವ ಇಂತಹ ಸಂಘಟಿತ ಅಪರಾಧ ಜಾಲವನ್ನು ಪತ್ತೆಹಚ್ಚಲು ಬಳ್ಳಾರಿ ಪೊಲೀಸರು ಕೈಗೊಂಡಿರುವ ಕಾರ್ಯಾಚರಣೆ ಶ್ಲಾಘನೀಯವಾಗಿದೆ. ಪ್ರಕರಣದ ಸಂಪೂರ್ಣ ಜಾಲವನ್ನು ಭೇದಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಪೊಲೀಸ್ ವರಿಷ್ಠ ಅಧಿಕಾರಿಗಳು ಆಗಿರುವಂತ ಸುಮನ್ ಪನ್ನಿಕರ್ ಮೇಡಂ ಅವರು ನೇರವಾಗಿ ಮತ್ತೊಬ್ಬರಿಗೆ ಮಾಹಿತಿ ನೀಡದೆ ಅವರಿಗೆ ನಂಬಿಕೆ ವಿಶ್ವಾಸ ಪ್ರಸಾರಾಗಿರುವ ಒಂದಿಷ್ಟು ಅಧಿಕಾರಿಗಳನ್ನು ಸೇರಿಸಿ ಒಂದು ತಂಡವನ್ನು ರಚನೆ ಮಾಡಿ ಈ ಪ್ರಕರಣ ಬೆನ್ನು ಹತ್ತಿದ್ದು ಇದರಲ್ಲಿ ಯಶಸ್ವಿ ಕಾರ್ಯಾಚರಣೆಯನ್ನು ಕಂಡಿದ್ದಾರೆ ಸಾಧಾರಣವಾಗಿ ಪೊಲೀಸ್ ವರಿಷ್ಠ ಅಧಿಕಾರಗಳು ಕಾಟಾಚಾರಕ್ಕೆ ಒಂದು ತಂಡವನ್ನು ರಚನೆ ಮಾಡಿ ವಿಚಾರಣೆ ನಿಮಿತ್ತ ಕಳಿಸುವಂತಹ ವಿಚಾರವಾಗಿರುತ್ತಿತ್ತು ಆದರೆ ನೇರವಾಗಿ ಎಸ್ಪಿ ಅವರು ಈ ತಂಡಕ್ಕೆ ಕ್ಯಾಪ್ಟನ್ ಆಗಿದ್ದು ಇದು ಉತ್ತಮ ಬೆಳವಣಿಗೆಯಾಗಿದ್ದು ಅತಿ ವೇಗವಾಗಿ ಪ್ರಕರಣವನ್ನು ಭೇದಿಸಲು ಸಾಧ್ಯವಾಗಿದೆ ಎನ್ನುವುದು ಮೇಲೆ ನೋಟಕ್ಕು ಕಂಡುಬರುತ್ತದೆ ಗುಪ್ತವಾಗಿ ತಂಡ ಕೆಲಸ ಮಾಡಿದ್ದು ಸಂಬಂಧಿತ ಕಾರ್ಯಗಳಿಗೆ ಮಾಹಿತಿ ಇಲ್ಲದೆ ಆಪರೇಷನ್ ಮಾಡಿದ್ದು ಯಶಸ್ವಿಯನ್ನು ಕಂಡಿದ್ದಾರೆ ಪ್ರಸ್ತುತ ಇರುವ ಕೆಲ ಠಾಣೆಯ ಅಧಿಕಾರಿಗಳಿಗೆ ಈ ವಿಷಯ ಗೊತ್ತಾಗಿದ್ದರೆ ಖಂಡಿತ ಅದನ್ನು ದಾರಿ ತಪ್ಪಿಸಿ ಮತ್ತೊಂದು ರೀತಿಯಲ್ಲಿ ಹೋಗುವಂತೆ ಪ್ರಯತ್ನ ನಡೆಯುತ್ತಿದ್ದು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಿದೆ.


News 9 Today

Leave a Reply