This is the title of the web page
This is the title of the web page

Please assign a menu to the primary menu location under menu

State

ಬಳ್ಳಾರಿಜಿಲ್ಲಾ ಕುರಬರ ಸಂಘದಲ್ಲಿ ಪದಾಧಿಕಾರಿಗಳ ವಿಚಾರವಾಗಿ ಚರ್ಚೆ: ಅಧ್ಯಕ್ಷರ ರಾಜೀನಾಮೆ, ಕಾನೂನು ಪ್ರಕ್ರಿಯೆ ಬಗ್ಗೆ ಗೊಂದಲ.

ಬಳ್ಳಾರಿಜಿಲ್ಲಾ ಕುರಬರ ಸಂಘದಲ್ಲಿ ಪದಾಧಿಕಾರಿಗಳ ವಿಚಾರವಾಗಿ ಚರ್ಚೆ: ಅಧ್ಯಕ್ಷರ ರಾಜೀನಾಮೆ, ಕಾನೂನು ಪ್ರಕ್ರಿಯೆ ಬಗ್ಗೆ ಗೊಂದಲ.

ಬಳ್ಳಾರಿಜಿಲ್ಲಾ ಕುರಬರ ಸಂಘದಲ್ಲಿ ಪದಾಧಿಕಾರಿಗಳ ವಿಚಾರವಾಗಿ ಚರ್ಚೆ: ಅಧ್ಯಕ್ಷರ ರಾಜೀನಾಮೆ, ಕಾನೂನು ಪ್ರಕ್ರಿಯೆ ಬಗ್ಗೆ ಗೊಂದಲ.!!

ಬಳ್ಳಾರಿ(14) ಬಳ್ಳಾರಿ ಜಿಲ್ಲಾ ಕುರಬರ ಸಂಘದ ಅಧ್ಯಕ್ಷರಾದ ಪಿ. ಗಾದಿಲಿಂಗನಗೌಡ ಅವರು ಸಲ್ಲಿಸಿರುವ ರಾಜೀನಾಮೆ ಪತ್ರದ ವಿಚಾರ ಇದೀಗ ಸಂಘದ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರಾಜೀನಾಮೆ ಅಂಗೀಕಾರದ ಪ್ರಕ್ರಿಯೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯ ಕುರಿತಂತೆ ಹಲವು ಪ್ರಶ್ನೆಗಳು ಉದ್ಭವಿಸಿವೆ.

ಮೂಲಗಳ ಪ್ರಕಾರ, ಪಿ. ಗಾದಿಲಿಂಗನಗೌಡ ಅವರು ಸಲ್ಲಿಸಿದ್ದ ರಾಜೀನಾಮೆ ಪತ್ರದ ಕುರಿತು ಸಂಬಂಧಪಟ್ಟ ಸಹಕಾರ ಸಂಘಗಳ ನೋಂದಣಾಧಿಕಾರಿಗಳ ಕಚೇರಿಯು, ತಮ್ಮ ವ್ಯಾಪ್ತಿಯಲ್ಲಿ ರಾಜೀನಾಮೆ ಅಂಗೀಕರಿಸಲು ಸಾಧ್ಯವಿಲ್ಲ.

ಈ ಕುರಿತು ತೀರ್ಮಾನ ಕೈಗೊಳ್ಳುವುದು ಸಂಘದ ಕಾರ್ಯಕಾರಿ ಸಮಿತಿಯ ವ್ಯಾಪ್ತಿಗೆ ಒಳಪಟ್ಟಿರುತ್ತದೆ ಎಂದು ತಿಳಿಸಿ, 14/10/2026ರಂದು ಸಂಘಕ್ಕೆ ಪತ್ರ ರವಾನಿಸಿದ್ದಾರೆ.

ಇದರ ನಡುವೆಯೇ, ಇತ್ತೀಚೆಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ ಎಂದು ಹೇಳಿಕೊಂಡಿರುವ ಕೆಲವರು, ನ್ಯಾಯಾಲಯದಲ್ಲಿರುವ ಹಳೇ ಪ್ರಕರಣವನ್ನು ಹಿಂಪಡೆದ.. ಹಿನ್ನಲೆ ತಾವೇ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಎಂದು ಹೇಳಿಕೊಂಡು ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ.

ಇನ್ನೊಂದೆಡೆ, ಮುಂದಿನ 21ದಿನಗಳೊಳಗೆ ಚುನಾವಣಾ ಪ್ರಕ್ರಿಯೆ ನಡೆಯಲಿದೆ ಎನ್ನಲಾಗುತ್ತಿರುವ ಸಂದರ್ಭದಲ್ಲಿ, ನೂತನ ಪದಾಧಿಕಾರಿಗಳೆಂದು ಹೇಳಿಕೊಳ್ಳುತ್ತಿರುವವರ ನಡೆ ಸಂಘದ ಸದಸ್ಯರು ಹಾಗೂ ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನು ಮೂಡಿಸಿದೆ. ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಅಧಿಕಾರದ ಹಕ್ಕು ಪ್ರತಿಪಾದಿಸುವುದು ಎಷ್ಟರ ಮಟ್ಟಿಗೆ ಕಾನೂನುಬದ್ಧ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ.

ಕಾನೂನುಬದ್ಧತೆ ಕುರಿತು ಸ್ಪಷ್ಟನೆ ಅಗತ್ಯ

ಸಂಘದ ಪದಾಧಿಕಾರಿಗಳ ಆಯ್ಕೆ, ಅಧ್ಯಕ್ಷರ ರಾಜೀನಾಮೆ ಅಂಗೀಕಾರ, ಕಾರ್ಯಕಾರಿ ಸಮಿತಿಯ ನಿರ್ಧಾರ ಹಾಗೂ ನ್ಯಾಯಾಲಯದಲ್ಲಿರುವ ಪ್ರಕರಣದ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಅಧಿಕೃತ ದಾಖಲೆಗಳ ಆಧಾರದ ಮೇಲೆ ಸ್ಪಷ್ಟನೆ ದೊರೆಯಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಂಘದ ಆಡಳಿತ ಮಂಡಳಿ ಈ ಕುರಿತು ಸ್ಪಷ್ಟ ಮಾಹಿತಿ ನೀಡಿದರೆ ಗೊಂದಲಗಳಿಗೆ ತೆರೆ ಬೀಳುವ ಸಾಧ್ಯತೆಯಿದೆ.

ಸಂಘದ ಗೌರವ ಮತ್ತು ಪ್ರತಿಷ್ಠೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಕಾನೂನು ಚೌಕಟ್ಟಿನೊಳಗೆ ನಡೆದುಕೊಳ್ಳಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಸಂಘದ ಆಂತರಿಕ ವಿಚಾರಗಳು ಬೀದಿಚರ್ಚೆಯಾಗುವ ಬದಲು, ನಿಯಮಾನುಸಾರ ಮತ್ತು ಪಾರದರ್ಶಕವಾಗಿ ಬಗೆಹರಿಯಬೇಕು ಎಂಬುದು ಸದಸ್ಯರು ಹಾಗೂ ಸಾರ್ವಜನಿಕರ ಆಶಯವಾಗಿದೆ..


News 9 Today

Leave a Reply