This is the title of the web page
This is the title of the web page

Please assign a menu to the primary menu location under menu

State

ಪೊಲೀಸ್ ಠಾಣೆಗಳಲ್ಲಿ ಲಂಚದ ಕರ್ಮಕಾಂಡ!!ಗ್ರಾಮೀಣ ಠಾಣೆಯೆಲ್ಲಿ ನಿಲ್ಲದ, ಕರ್ಮ ಕಾಂಡ.

ಪೊಲೀಸ್ ಠಾಣೆಗಳಲ್ಲಿ ಲಂಚದ ಕರ್ಮಕಾಂಡ!!ಗ್ರಾಮೀಣ ಠಾಣೆಯೆಲ್ಲಿ ನಿಲ್ಲದ, ಕರ್ಮ ಕಾಂಡ.

ಪೊಲೀಸ್ ಠಾಣೆಗಳಲ್ಲಿ ಲಂಚದ ಕರ್ಮಕಾಂಡ!!ಗ್ರಾಮೀಣ ಠಾಣೆಯೆಲ್ಲಿ ನಿಲ್ಲದ, ಕರ್ಮ ಕಾಂಡ.

ಬಳ್ಳಾರಿ( 3) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನೇರವಾಗಿ ದೂರವಾಣಿಯಲ್ಲಿ ಲಂಚ ಕೇಳುತ್ತಿರುವುದು ಆಡಿಯೋ-ವಿಡಿಯೋ
ಒಂದು ಬಹಿರಂಗವಾಗಿದೆ.

ಬಳ್ಳಾರಿ ಜಿಲ್ಲೆಯ ಲಾರಿ ಮಾಲೀಕರ ಸಂಘದ ಅಧ್ಯಕ್ಷರಾಗಿರುವಂತ ಚಲ್ಲಾ ಮಹೇಶ್ ಅವರ ಬಸ್ಸು ಒಂದು ಅಪಘಾತಕ್ಕೆ ಗುರಿಯಾಗಿದ್ವು ಅದನ್ನು ಠಾಣೆಯಲ್ಲಿ ಪ್ರಕರಣ ದಾಖಲೆಸಿ ವಾಹನವನ್ನು ಬಿಡಿಸಿಕೊಳ್ಳಲು ಠಾಣೆಗೆ ಹೋಗಿರುತ್ತಾರೆ. 1/7/2026 ರಂದು ಬೊಮ್ಮನಾಳ್ ರಸ್ತೆಯ ಮಂಗಮ್ಮ ಕ್ಯಾಂಪು ಬಳಿ ಇವರು ಬಸ್ಸು ಮತ್ತು ಒಂದು ಲಾರಿ ಡಿಕ್ಕಿ ಆಗಿದ್ದು ಬಸ್ಸು ಒಂದು ಭಾಗ ಅಪಘಾತಕ್ಕೆ ಗುರಿ ಯಾಗಿರುತ್ತದೆ.

ಆಂಧ್ರ ಪ್ರದೇಶ್ ಮೂಲದ ಲಾರಿ ಬಸ್ಸು ಎರಡು ಅಪಘಾತಕ್ಕೆ ಗುರಿಯಾಗಿದ್ದು ಲಾರಿ ತಕ್ಷಣವೇ ಬಿಡುಗಡೆಯಾಗಿದ್ದು
ಬಸ್ಸು ಮಾತ್ರ ಬಿಡುಗಡೆಯಾಗದೇ ಮೂರು ದಿನದಿಂದ ಠಾಣೆಯಲ್ಲಿ ಇರುತ್ತದೆ.

ಠಾಣೆ ಅಧಿಕಾರಿಗಳನ್ನು ಬಸ್ ಮಾಲೀಕರು,ಮತ್ತು ಲಾರಿ ಸಂಘದ ಅಧ್ಯಕ್ಷರಾಗಿರುವ ಮಹೇಶ್ ಮತ್ತು ಅವರ ಸ್ನೇಹಿತರು ವಾಹನವನ್ನು ಆರ್ ಟಿ ಓ ಕಚೇರಿಗೆ ಬರೆದು ವಾಹನವನ್ನು ಮುಕ್ತಿಗೊಳಿಸಲು ಕೋರಿರ್ತಾರೆ ಆದರೆ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿರುವಂತ ಹೊನ್ನಪ್ಪ ಅವರು ಲಾರಿ ಸಂಘದ ಅಧ್ಯಕ್ಷ ಜೊತೆಯಲ್ಲಿ ಹಣವನ್ನು ಬೇಡಿಕೆ ಇಟ್ಟಿರುತ್ತಾರೆ,ನಿಮ್ಮ ವಾಹನ ನಮ್ಮ ಠಾಣೆಯಿಂದ ಕ್ಲಿಯರೆನ್ಸ್ ಹಾಗಲು, ಹತ್ತು ಸಾವಿರ ರೂಪಾಯಿಕೊಡಬೇಕು ಎಂದು ಬೇಡಿಕೆ ಇಟ್ಟಿರುತ್ತಾರೆ.

ಇದರಲ್ಲಿ ಮಹೇಶ್ ಅವರು 5 ಸಾವಿರ ರೂಪಾಯಿಗಳು ನೀಡುವುದಾಗಿ ಮೊಬೈಲ್ ನಲ್ಲಿ ಇಬ್ಬರು ಸಂಭಾಷಣೆ ಮಾಡಿಕೊಂಡು ಇರುತ್ತಾರೆ. ಪ್ರಸ್ತುತ5,ಸಾವಿರ ತದನಂತರ ಇನ್ನೂ ಎರಡು ಸಾವಿರ ರೂಪಾಯಿ ನೀಡುವುದಾಗಿ ಮಾತನಾಡಿಕೊಂಡು ಠಾಣೆಯಲ್ಲಿ 5 ಸಾವಿರ ರೂಪಾಯಿ ಹೊನ್ನಪ್ಪ ಅವರಿಗೆ ರಹಸ್ಯವಾಗಿ ನೀಡಿದ್ದು, ಇನ್ನೂ ಎರಡು ಸಾವಿರ ರೂಪಾಯಿಗಳು ತಂದು ಕೊಡುವಂತೆ ಹೊನ್ನಪ್ಪ ಠಾಣೆಯ ಮುಂದೆ ಬೇಡಿಕೆ ನೀಡಿರುತ್ತಾರೆ, ಠಾಣೆ ಮುಂದೆ ಬೇಡಿಕೆ ಇಟ್ಟಿದ್ದು ಬಿಟ್ಟು, ಇತರ ಇವರಿಬ್ಬರ ಸಂಭಾಷಣೆ ಮತ್ತೊಂದು ಮೊಬೈಲ್ ನಲ್ಲಿ ರೆಕಾರ್ಡ್ ಆಗಿರುತ್ತದೆ.

ಈಗಾಗಲೇ ಗ್ರಾಮೀಣ ಠಾಣೆಯಲ್ಲಿ ಕೆಲ ಆರೋಪಗಳ ಅಡಿಯಲ್ಲಿ ಠಾಣೆ ಅಧಿಕಾರಿ, ಒಬ್ಬರು ಪೊಲೀಸ್ ವರಿಷ್ಠ ಅಧಿಕಾರಿ ಕಣ್ಣಿಗೆ ಗುರಿಯಾಗಿದ್ದು, ಇನ್ನೂ ಠಾಣೆಯಲ್ಲಿ ಪೂರ್ತಿ ವಾತಾವರಣ, ಸರಿ ಹೋಗದೆ ಇರುವ ವಾತಾವರಣದಲ್ಲಿ ಅದೇ ಗ್ರಾಮೀಣ ಠಾಣೆಯಲ್ಲಿ ಮತ್ತೆ ಲಂಚದ ಕರ್ಮಕಾಂಡ ಬಯಲಾಗಿದ್ದು, ಠಾಣೆ ಅಧಿಕಾರಿಗಳಿಗೆ ಕಿಂಚಿತ್ತಾದರೂ ಭಯ ಭೀತಿ ಇಲ್ಲವೇ ಅನ್ನೋದಕ್ಕೆ ಹೊನ್ನಪ್ಪನ ಆಡಿಯೋ ವಿಡಿಯೋ ಸಾಕ್ಷಿ ಎಂದರು ತಪ್ಪೇನಿಲ್ಲ.

ಪೊಲೀಸ್ ವರಿಷ್ಠ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳಲಿದ್ದಾರೆ ಇಂದು ಕಾದು ನೋಡಬೇಕಿದೆ,ಇಲ್ಲಿಯಾ ಠಾಣೆಯ ಅಧಿಕಾರಿಗಳಿಗೆ ಲಂಚದ ಕರ್ಮಕಾಂಡದ ವಿಚಾರ ಅವರ ಗಮನಕ್ಕ ಇದಿಯೋ ಇಲ್ಲವೋ ಎನ್ನುವುದು ತಿಳಿಬೇಕಾಗಿದೆ. ಠಾಣೆಯಲ್ಲಿ ಸಣ್ಣ ಪೇದೆ ಕೂಡ ಹಣ ವಸೂಲಿ ಮಾಡಿದರೆ ಮೇಲಿನ ಅಧಿಕಾರಿಗಳ ಗಮನಕ್ಕೆ ಖಂಡಿತ ಇರುತ್ತದೆ ಎನ್ನುವುದು ಸಾಮಾನ್ಯ ಸಂಗತಿ ಆಗಿದೆ.

ಆದರೆ ಉನ್ನತ ಮಟ್ಟದಲ್ಲಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹೊನ್ನಪ್ಪ ರಾಜ ರೋಷವಾಗಿ ಲಂಚವನ್ನು ಬೇಡಿಕೆ ನೀಡುತ್ತಾರೆಂದರೆ ಇಲಾಖೆಗೆ ಕಪ್ಪು ಚುಕ್ಕೆ ಆಗಿದೆ ಎಂದರು ತಪ್ಪೇನಿಲ್ಲ.


News 9 Today

Leave a Reply