This is the title of the web page
This is the title of the web page

Please assign a menu to the primary menu location under menu

State

ಕೋಟಿ ಗಟ್ಟಲೆ ವಂಚನೆ, ಪಂಗನಾಮ ಹಾಕಿದ್ದ ವಿದೇಶಿ ಟ್ರೇಡಿಂಗ್ ಕಂಪನಿ ಆಪ್!! ಜನರು ಗೊಳೋ ಗೊಳೋ…

ಕೋಟಿ ಗಟ್ಟಲೆ ವಂಚನೆ, ಪಂಗನಾಮ ಹಾಕಿದ್ದ ವಿದೇಶಿ ಟ್ರೇಡಿಂಗ್ ಕಂಪನಿ ಆಪ್!! ಜನರು ಗೊಳೋ ಗೊಳೋ…

ಕೋಟಿ ಗಟ್ಟಲೆ ವಂಚನೆ, ಪಂಗನಾಮ ಹಾಕಿದ್ದ ವಿದೇಶಿ ಟ್ರೇಡಿಂಗ್ ಕಂಪನಿ ಆಪ್!! ಜನರು ಗೊಳೋ ಗೊಳೋ…
ಬಳ್ಳಾರಿ (5)ನಗರದಲ್ಲಿ ಮತ್ತೊಂದು ಜನರಿಗೆ ಟೋಪಿ ಹಾಕುವ ಹಾಕಿರುವ ಟ್ರೇಡಿಂಗ್ ಆ್ಯಪ್.

ವೀದೇಶಿ ಟ್ರೇಡಿಂಗ್ ಆ್ಯಪ್ ನಲ್ಲಿ ಲಕ್ಷಗಟ್ಟಲೆ ಹಣವನ್ನು ಹಾಕಿ ಮೋಸ ಹೋಗಿರುವ ಘಟನೆ ಒಂದು ನಗರದಲ್ಲಿ ಬೆಳಕುಗೆ ಬಂದಿದೆ.

ಯಾವುದೇ ಅಡ್ರೆಸ್ ಇಲ್ಲದ ನಕಲಿ ಅ್ಯಪ್ ಗಳ ಸಹವಾಸಮಾಡಬೇಡಿ ವಂಚನೆ ಆಗುತ್ತದೆ ಎಂದು ಪೊಲೀಸ್ ಇಲಾಖೆ ಎಷ್ಟು ತಿಳಿ ಹೇಳಿದರು ಜನರು ಮಾತ್ರ ಆಸೆ ಪಟ್ಟು ನಕಲಿ ಕಂಪನಿ ಅ್ಯಪ್ ಗಳಿಗೆ ಹಣ ಹಾಕುವುದು ನಿಲ್ಲುತ್ತಾ ಇಲ್ಲ.

ಬಳ್ಳಾರಿ ನಗರದ ಅಗಡಿ ಮಾರೆಪ್ಪ ಬಡಾವಣೆಯಲ್ಲಿ ಪರಿಚಯ ಇರುವ ರಮೇಶ್ ಚೌದರಿ ಯನ್ನವರು ವಿದೇಶಿ ಮೂಲದ ಒಂದು ಬೋನ್ ಚಾಟ್ (BON -chat)ಟ್ರೇಡಿಂಗ್ ಅ್ಯಪ್ ಬಂದಿದೆ ಇದರಲ್ಲಿ ನಾವು ಎಷ್ಟು ಹೂಡಿಕೆ ಮಾಡಿದರೆ ಮಾಡಿದಷ್ಟು ಹಣಕ್ಕೆ 60 ದಿನದಲ್ಲಿ ಡಬಲ್ ಹಣ ಆಗುತ್ತದೆ ಎಂದು ಪ್ರತಿನಿತ್ಯ ಒಂದಿಷ್ಟು ಸಮಯದಲ್ಲಿ ಟ್ರೇಡಿಂಗ್ ಮಾಡುತ್ತಿರಬೇಕು ಯ ಅ್ಯಪ್ ನಲ್ಲಿ ಎಂದು ಹೇಳಿ ಪರಿಚಯ ಇರುವ ಅವರ ಮೂಲಕ ಬ್ಯುಸಿನೆಸ್ ಆರಂಭ ಮಾಡಿಸಿ ಯಾವುದೇ ಪೇಪರ್ ಕಾಗದ ಇಲ್ಲದೆ ಆನ್ಲೈನ್ ನಲ್ಲಿ ಟ್ರೇಡಿಂಗ್ ವ್ಯಾಪಾರ ಎಂದು ಜನರ ಕಿವಿಗೆ ಹೂವು ಇಟ್ಟು ಅಂದಾಜು 120 ಜನ ಮೇಲಪಟ್ಟು ರಮೇಶ್ ಚೌದರಿಯ ಅ್ಯಪ್ ಐಡಿ ಅಡಿಯಲ್ಲಿ ಸಣ್ಣ ಮೊತ್ತದಿಂದ ಹಿಡಿದು ಲಕ್ಷಗಟ್ಟಲೆ ಇವರು ಮಾತು ನಂಬಿ ನಕಲಿ ಅ್ಯಪ್ ಗೆ ಹಣವನ್ನು ಹಾಕಿದ್ದಾರೆ.

ಈ ರಮೇಶ್ ಚೌದರಿ ಅನ್ನೋವರಿಗೆ ಮತ್ತೊಬ್ಬರು ಯಾರೋ ಪರಿಚಯ ಆಗಿದ್ದು, ಹೆಚ್ಚಿನ ಹಣ ಸಿಗುತ್ತದೆ ಎಂಬುವ ಆಸೆ ತೋರಿಸಿದ್ದು ಇದರಿಂದ ಜನರನ್ನು ನಂಬಿಸುವ ಬಿಸಿನೆಸ್ ಒಂದು ಆರಂಭ ಮಾಡಿದ್ದಾರೆ ರಮೇಶ್ ಚೌದರಿ. ಇವರ ಐಡಿ ಅಡಿಯಲ್ಲಿ ಯಲ್ಲಿ ಅಂದಾಜು ಕೋಟಿ ಗಟ್ಟಲೆ ವ್ಯವಹಾರ ನಡೆದಿದೆ!! ಎಂದು ನೊಂದ ಜನರು ಕಣ್ಣೀರು ಮುನ್ನಿರಿನ ಹಾತಂಕದ ಸುದ್ದಿ ಹೊರಬಿದ್ದಿದೆ.

ಇದು ಒಂದು ರೀತಿಯಲ್ಲಿ ಚೈನ್ ಲಿಂಕ್ ಮೋಸದ ದಂದೆ ಇದು ಒಬ್ಬ ವ್ಯಕ್ತಿ ಐಡಿ ಒಳಗೆ ಮತ್ತೊಬ್ಬ ವ್ಯಕ್ತಿ ಹಣವನ್ನು ಹೂಡಿಕೆ ಮಾಡಿ ಟ್ರೇಡಿಂಗ್ ಆರಂಭಮಾಡಿದರೆ ಮೊದಲಿನ ಐ,ಡಿ ದಾರನಿಗೆ ಒಂದಿಷ್ಟು ಪರ್ಸೆಂಟ್ಹಣ ಸಿಗುತ್ತೆ.

ಇದರಿಂದ ಮೊದಲಿನ ಐಡಿದಾರ ಜನರಿಗೆ ನಂಬಿಸುವ ಸಿಹಿ ಕಥೆ ಒಂದು ಆರಂಭ ಮಾಡುತ್ತಾರೆ. ಅವರಿಗೆ ಇಷ್ಟ ಬಂದಿದೆ ಇವರಿಗೆ ಇಷ್ಟು ಬಂದಿದೆ ಎರಡು ತಿಂಗಳಲ್ಲಿ ನಿಮ್ಮ ಹಣ ದುಪ್ಪಟ್ಟಾಗಿ ಟ್ರೇಡಿಂಗ್ ಮುಖಾಂತರ ಡಬ್ಬಲ್ ಹಣ ಯಾವುದೇ ಪೇಪರ್ ಪೆನ್ನು ಅವಶ್ಯಕತೆಯಿಲ್ಲ ಕೇವಲ ಅಂಗೇಯಲ್ಲಿರುವ ಮೊಬೈಲ್ ಟ್ರೇಡಿಂಗ್ ಅ್ಯಪ್ ನಲ್ಲಿ ಮಾಡಿದರೆ ಸಾಕು ಎನ್ನುವ ಕಟ್ಟುಕಥೆಯನ್ನು ಸಿನಿಮಾ ಒಂದನ್ನು ತೋರಿಸಿರುತ್ತಾರೆ.

ಲಕ್ಷಗಟ್ಟಲೆ ಹಣ ಹಾಕಿರುವ ಅವರು ಎರಡು ತಿಂಗಳು ಆದರೂ ಹತ್ತು ರೂಪಾಯಿ ಅವರಿಗೆ ಬಾರದೆ ಹಿನ್ನೆಲೆಯಲ್ಲಿ ಅನುಮಾನ ಬಂದು ಸಿಹಿಮಾತು ಹೇಳಿದ ಅವರು ಬಳಿ ಹೋಗಿ ನಮಗೇನು ಲಾಭ ಆಗೇ ಇಲ್ಲ ನಮ್ಮ ಮೊತ್ತವನ್ನು ವಾಪಸ್ ಕೊಡಿ ನಿಮ್ಮ ಐ,ಡಿ ಯಲ್ಲಿ ನಾವು ಹಣ ಹಾಕಿದ್ದೇವೆ ಎಂದು ರಮೇಶ್ ಅವರೇ ಮನೆ ಹತ್ತಿರ ಮಾತನ್ನು ಚಕಮಕಿ ನಡೆಸಿದ್ದಾರೆ.

ಆದರೆ ರಮೇಶ್ ಚೌದರಿ ಮಾತ್ರ ಬುದ್ದಿವಂತಿಕೆಯ ಮಾತುಗಳ ಮೂಲಕ ನೀವು ಏನಾದರೂ ನಮ್ಮ ಬಳಿ ಬರಿಸಿಕೊಂಡಿದ್ದೀರಾ?? ನಮಗೆ ಏನಾದರೂ “ಕೈ “ಗೆ ಹಣ ಕೊಟ್ಟಿದ್ದೀರಾ ನಮ್ಮ ಮನೆ ಮುಂದೆ ಬಂದು ಗಲಾಟೆ ಮಾಡಬೇಡಿ ಇದು ಸಂಸಾರಸ್ಥರ ಮನೆ ಇದು ವ್ಯಾಪಾರದ ಮನೆ ಅಲ್ಲ ಆನ್ಲೈನಲ್ಲಿ ಹೋಗಿ ಕೇಳಿ ಕೊಳ್ಳಿ ಇಲ್ಲ ಅಂದರೆ ನೀವು ನಮ್ಮ ಮನೆ ಹತ್ತಿರ ಬಂದರೆ ನಿಮ್ಮ ವಿರುದ್ಧವೇ ದೂರು ಕೊಡಬೇಕಾಗುತ್ತದೆ ಎಂದು ಬೆದರಿಸಿದ್ದಾರೆ.
ಎನ್ನುವುದು ಕೂಡ ಐ,ಡಿ ಗ್ರಹಕರು ಗೋಳೋ ಗೋಳೋ ಎಂದು ನೋವನ್ನು ತೋಡಿಕೊಂಡಿದ್ದಾರೆ. ಒಂದಿಷ್ಟು ಹಣ ಐ ಡಿ ಬಿಟ್ಟು ನೇರವಾಗಿ ಫೋನ್ ಪೇ ಗೆ ಹಾಕಿಸಿ ಕೊಂಡಿದ್ದಾರೆ ಇದರ ಹೆಂದೆ ದೊಡ್ಡ ಜಾಲ ಇರಬೇಕು ಮಂಗಳೂರು ಮೂಲದ ಅವರು ಕೂಡ ಇದ್ದಾರೆ ಅನ್ನೋದು ಕೇಳಿ ಬರುತ್ತೆ. ನೊಂದ ಅವರು ಹೇಳೋದು ನಮ್ಮ ಹಣ ಇವರ ಬಳಿ ಇದೇ ನಕಲಿ ಅ್ಯಪ್ ಮಾಡಿ ಮೋಸ ಮಾಡಿದ್ದಾರೆ ಇದರಲ್ಲಿ ಕೆಲವರು ತಮ್ಮ ಐ ಡಿ ನಲ್ಲಿ ಹಾಕಿದ್ದ ಹಣ ವಾಪಸ್ ಮಾಡುವೆ ಅನ್ನುವ ಮಾತು ಆಗಿದೆ ಅನ್ನುತ್ತಾರೆ. ಠಾಣೆಯಲ್ಲಿ ದೂರು ಕೊಡಲು ಸಿದ್ದವಾಗಿದ್ದರೆ ತನಿಖೆ ಆರಂಭ ಆದ್ರೆ ಅಸಲಿ ಕಥೆ ಹೊರಗಡೆ ಬರುತ್ತೆ.


News 9 Today

Leave a Reply