This is the title of the web page
This is the title of the web page

Please assign a menu to the primary menu location under menu

State

ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಅಪಾರ ಪ್ರಮಾಣದಲ್ಲಿ ರಾಗಿ!! ಹಲವು ಅನುಮಾನಗಳಿಗೆ ಕಾರಣವಾದ ಬೆಳವಣಿಗೆ!

ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಅಪಾರ ಪ್ರಮಾಣದಲ್ಲಿ ರಾಗಿ!! ಹಲವು ಅನುಮಾನಗಳಿಗೆ ಕಾರಣವಾದ ಬೆಳವಣಿಗೆ!

ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಅಪಾರ ಪ್ರಮಾಣದಲ್ಲಿ ರಾಗಿ!! ಹಲವು ಅನುಮಾನಗಳಿಗೆ ಕಾರಣವಾದ ಬೆಳವಣಿಗೆ!

ಬಳ್ಳಾರಿ(26)ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ, ಬಳ್ಳಾರಿ ಜಿಲ್ಲೆಯಲ್ಲಿ ರಾಗಿ ಉತ್ಪಾದನೆ ಕಡಿಮೆಯಾಗಿರ ಬಹುದುದೆಂಬ ನಿರೀಕ್ಷೆಯ ನಡುವೆಯೇ, ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಅಪಾರ ಪ್ರಮಾಣದಲ್ಲಿ ರಾಗಿ ಬಂದಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸ್ಥಳೀಯವಾಗಿ ರಾಗಿ ಉತ್ಪಾದನೆ ಕಡಿಮೆಯಾಗಿರುವ ಸಂದರ್ಭದಲ್ಲಿ ಇಷ್ಟೊಂದು ಪ್ರಮಾಣದ ರಾಗಿ ಮಾರುಕಟ್ಟೆಗೆ ಎಲ್ಲಿಂದ ಬರುತ್ತಿದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ ರಾಗಿ ಪಡಿತರ ವ್ಯವಸ್ಥೆ, ನ್ಯಾಯಬೆಲೆ ಅಂಗಡಿಗಳು ಅಥವಾ ಸರ್ಕಾರಿ ಗೋದಾಮುಗಳಿಂದ ಅಕ್ರಮವಾಗಿ ಬಂದಿದೆಯೇ ಎಂಬ ಅನುಮಾನಗಳೂ ವ್ಯಕ್ತವಾಗುತ್ತಿವೆ.

ಇದಲ್ಲದೆ, ಅಲ್ಪ ಪ್ರಮಾಣದ ರಾಗಿಯನ್ನು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, ಅದಕ್ಕೆ ಸಂಬಂಧಿಸಿದಂತೆ ಮಾರುಕಟ್ಟೆ ಶುಲ್ಕ ಪಾವತಿಸಿ ಅಧಿಕೃತ ಬಿಲ್ ಪಡೆದುಕೊಂಡ ನಂತರ, ಆ ಬಿಲ್‌ಗಳನ್ನು ಬಳಸಿಕೊಂಡು ದೊಡ್ಡ ಪ್ರಮಾಣದಲ್ಲಿ ಕಾಳಸಂತೆ ದಂಧೆ ನಡೆಸುವ ಉದ್ದೇಶದಿಂದ ರಾಗಿ ಮಾರುಕಟ್ಟೆಗೆ ತರಲಾಗುತ್ತಿದೆಯೇ ಎಂಬ ಆರೋಪಗಳು ಕೇಳಿಬರುತ್ತಿವೆ.

ಈ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಳ್ಳಬೇಕಿದೆ.

ಮಾರುಕಟ್ಟೆಗೆ ಬರುತ್ತಿರುವ ರಾಗಿಯ ಮೂಲ, ಸಾಗಣೆ ದಾಖಲೆಗಳು, ರೈತರ ವಿವರಗಳು ಹಾಗೂ ಮಾರಾಟದ ವಹಿವಾಟಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕು.

ಸರ್ಕಾರದ ಪಡಿತರ ವ್ಯವಸ್ಥೆಯ ಅಕ್ಕಿ ಅಥವಾ ಧಾನ್ಯಗಳು ಕಾಳಸಂತೆಗೆ ಹೋಗದಂತೆ ತಡೆಯುವಂತೆ, ರಾಗಿ ವಿಚಾರದಲ್ಲಿಯೂ ಕಟ್ಟುನಿಟ್ಟಿನ ನಿಗಾ ವಹಿಸುವುದು ಅತ್ಯಗತ್ಯ. ಈ ಅನುಮಾನಗಳ ಹಿಂದಿನ ಸತ್ಯಾಸತ್ಯತೆ ಹೊರಬರಬೇಕು ಮತ್ತು ಅಕ್ರಮ ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.


News 9 Today

Leave a Reply