ವಿಕಾಸ್ ಸೌಹಾರ್ದ ಬ್ಯಾಂಕ್‌ನಲ್ಲಿ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಆರೋಪ: ತನಿಖೆ ಬಳಿಕ ಸತ್ಯಾಸತ್ಯತೆ ಬಹಿರಂಗ ಎಂದ ಎಸ್ಪಿ ಡಾ” ಸುಮನ್ ಪನ್ನೇಕರ್!
ಖಾತೆದಾರರ ಗಮನಕ್ಕೆ ಬಾರದೆ ಹಣ ವರ್ಗಾವಣೆ ಮಾಡಲಾಗಿದೆ ಎಂಬ ದೂರು – ವಿಶ್ವನಾಥ್ ಹಿರೇಮಠ್,ಹಾಗೂ ಕೃತಿಕಾ ಸೌಹಾರ್ದ ಸೊಸೈಟಿಗೆ ಹಣ ವರ್ಗಾವಣೆಯಾಗಿರುವ ಬಗ್ಗೆ ಗಂಭೀರ ಆರೋಪ!!
ಬಳ್ಳಾರಿ(13)ಬಳ್ಳಾರಿಯ ವಿಕಾಸ್ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಖಾತೆದಾರರ ಅನುಮತಿ ಇಲ್ಲದೆ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಖಾತೆದಾರರ ಗಮನಕ್ಕೆ ಬಾರದೆ ಅವರ ಖಾತೆಯಿಂದ ಹಣವನ್ನು ವರ್ಗಾವಣೆ ಮಾಡಲಾಗಿದೆ ಹಾಗೂ ಬ್ಯಾಂಕಿಗೆ ಅಡಮಾನ (ಮಾರ್ಟ್ಗೇಜ್) ರೂಪದಲ್ಲಿ ನೀಡಿರುವ ದಾಖಲೆಗಳನ್ನು ಸಮರ್ಪಕವಾಗಿ ಒದಗಿಸದೆ ವಂಚಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಗಾಂಧಿ ನಗರ ಪೊಲೀಸ್ ಠಾಣೆ ಹಾಗೂ ಆಂಧ್ರಪ್ರದೇಶದ ಊರವಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿವೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೇಕರ್ ಅವರು, ಖಾತೆದಾರರು ತಮ್ಮ ಖಾತೆಯಿಂದಲೇ ತಮ್ಮ ಗಮನಕ್ಕೆ ಬಾರದೆ ಹಣ ವರ್ಗಾವಣೆ ಮಾಡಿ ವ್ಯವಹಾರ ನಡೆಸಲಾಗಿದೆ ಎಂದು ದೂರು ನೀಡಿದ್ದಾರೆ.
ಈ ಸಂಬಂಧ ಬ್ಯಾಂಕ್‌ನವರೂ ಕೆಲವು ದಾಖಲೆಗಳನ್ನು ಸಲ್ಲಿಸಿದ್ದಾರೆ. ಸಲ್ಲಿಸಿರುವ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ, ತನಿಖೆ ನಡೆಸಿದ ನಂತರ ಮುಂದಿನ ವರದಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಬ್ಯಾಂಕ್ ಅಧ್ಯಕ್ಷರ ಖಾತೆಗೆ ಹಣ ವರ್ಗಾವಣೆ ಆರೋಪ!
ವಿಕಾಸ್ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್‌ನ ಹಣಕಾಸು ವ್ಯವಹಾರಗಳ ಕುರಿತು ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ.
ಸಾಮಾನ್ಯವಾಗಿ ಬ್ಯಾಂಕ್‌ಗಳಲ್ಲಿ ಹಣ ವರ್ಗಾವಣೆ ಮಾಡುವಾಗ ಚೆಕ್, ವೋಚರ್ ಸೇರಿದಂತೆ ಅಗತ್ಯ ದಾಖಲೆಗಳು ಹಾಗೂ ಖಾತೆದಾರರ ಸಹಿಗಳನ್ನು ಪಡೆಯುವುದು ನಿಯಮಿತ ಪ್ರಕ್ರಿಯೆಯಾಗಿದೆ.
ಆದರೆ ಈ ಪ್ರಕರಣದಲ್ಲಿ ಅಂತಹ ಅನುಮತಿ ಮತ್ತು ದಾಖಲೆಗಳ ಕುರಿತು ಪ್ರಶ್ನೆಗಳು ಎದ್ದಿವೆ.
ದೂರುಗಳು ಹಾಗೂ ಲಭ್ಯವಾಗಿರುವ ಮಾಹಿತಿಯ ಪ್ರಕಾರ, 2023ರ ಏಪ್ರಿಲ್ ತಿಂಗಳಲ್ಲಿ ಬ್ಯಾಂಕ್ ಅಧ್ಯಕ್ಷರಾಗಿರುವ ವಿಶ್ವನಾಥ್ ಹಿರೇಮಠ್ ಅವರ ಖಾತೆಗೆ ಎರಡು ಪ್ರತ್ಯೇಕ ವ್ಯವಹಾರಗಳಲ್ಲಿ ತಲಾ ₹4 ಲಕ್ಷದಂತೆ ಒಟ್ಟು ₹8 ಲಕ್ಷ ಹಣ ಡೆಬಿಟ್ ಮಾಡಿ ವರ್ಗಾವಣೆ ಮಾಡಲಾಗಿದೆ ಬ್ಯಾಂಕ್ ದಾಖಲೆಗಳು ಹೇಳುತ್ತೇವೆ.
ಇದೇ ರೀತಿ 2021ರ ಮಾರ್ಚ್ 31ರಂದು ಕೃತಿಕಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ₹7 ಲಕ್ಷಕ್ಕೂ ಅಧಿಕ ಹಣ ವರ್ಗಾವಣೆ ಮಾಡಿರುವ ಬಗ್ಗೆಯೂ ಪ್ರಶ್ನೆಗಳು ಉದ್ಭವಿಸಿವೆ.
ಮಾರ್ಟ್ಗೇಜ್ ದಾಖಲೆಗಳ ವಿಚಾರವೂ ನಿಗೂಢ!
ಖಾತೆದಾರರು ಬ್ಯಾಂಕಿಗೆ ನೀಡಿರುವ ಆಸ್ತಿಯ ಅಡಮಾನ ದಾಖಲೆಗಳು, ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದ ಅನುಮತಿಗಳು ಹಾಗೂ ಹಣ ವರ್ಗಾವಣೆಗೆ ಬಳಸಲಾದ ಚೆಕ್ ಮತ್ತು ವೋಚರ್‌ಗಳ ಕುರಿತು ಸಮಗ್ರ ಪರಿಶೀಲನೆ ನಡೆಯಬೇಕಿದೆ. ಖಾತೆದಾರರ ಅನುಮತಿ ಇಲ್ಲದೆ ವ್ಯವಹಾರ ನಡೆದಿದೆಯೇ? ಹಣ ಯಾವ ಉದ್ದೇಶಕ್ಕೆ ವರ್ಗಾವಣೆಯಾಗಿದೆ? ಸಂಬಂಧಪಟ್ಟ ಹಣ ಯಾರ ಖಾತೆಗಳಿಗೆ ತಲುಪಿದೆ? ಎಂಬ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ಸಿಗಬೇಕಿದೆ.
ಈಗಾಗಲೇ ವಿಕಾಸ್ ಬ್ಯಾಂಕ್‌ಗೆ ಸಂಬಂಧಿಸಿದ ಬೆಳವಣಿಗೆಗಳು ಪತ್ರಿಕಾ ಮಾಧ್ಯಮಗಳಲ್ಲಿ ವರದಿಯಾಗಿದ್ದು, ದಿನದಿಂದ ದಿನಕ್ಕೆ ಹೊಸ ವಿಚಾರಗಳು ಮುನ್ನೆಲೆಗೆ ಬರುತ್ತಿವೆ.
ತನಿಖೆಯಿಂದ ಹೊರಬರಬೇಕಿದೆ ಸತ್ಯಾಸತ್ಯತೆ!
ಒಂದು ಸಹಕಾರಿ ಬ್ಯಾಂಕ್‌ನಲ್ಲಿ ಖಾತೆದಾರರ ಹಣದ ಸುರಕ್ಷತೆ ಮತ್ತು ಹಣಕಾಸಿನ ಪಾರದರ್ಶಕತೆ ಅತ್ಯಂತ ಮುಖ್ಯ. ಈ ಹಿನ್ನೆಲೆಯಲ್ಲಿ ವಿಕಾಸ್ ಸೌಹಾರ್ದ ಬ್ಯಾಂಕ್‌ನಲ್ಲಿನ ವ್ಯವಹಾರಗಳ ಕುರಿತು ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಸದ್ಯಕ್ಕೆ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದಲೇ ದೃಢಪಡಬೇಕಿದೆ. ಪೊಲೀಸ್ ಇಲಾಖೆಯ ಮುಂದಿನ ತನಿಖಾ ವರದಿಯಲ್ಲಿ ಇನ್ನಷ್ಟು ಮಹತ್ವದ ವಿಚಾರಗಳು ಬಹಿರಂಗವಾಗಲಿವೆಯೇ ಎಂಬುದನ್ನು ಕಾದು ನೋಡಬೇಕಿದೆ.. ಕೋರ್ಟ್ ಬೇಲು ಪಡೆದು ಹೊರ ಇರುವ ವಿಕಾಸ್ ಬ್ಯಾಂಕಿನ ಮುಖ್ಯಸ್ಥರು..
ಕಮಿಂಗ್ ಸೂನ್..













