ಗಲೀಜು ನೀರು ಹೊರೆಗೆ ಹಾಕಲು ನಿಂತ ಪಬ್ಲಿಕ್!! ಮಳೆ ನಿಂತು ದಿನಗಳು ಕಳೆದರೂ ರಸ್ತೆಯಿಂದ ನೀರು ಮಾಯವಾಗಿಲ್ಲ: ವಾರ್ಡ್ ನಿವಾಸಿಗಳ ಆಕ್ರೋಶ!!
ಪಾಲಿಕೆ ನಿರ್ಲಕ್ಷ ಜನಪ್ರತಿನಿಧಿಗಳುಗೆ ಶಾಪ!!
ಬಳ್ಳಾರಿ(30)ಮಳೆ ನಿಂತು ಹಲವು ದಿನಗಳು ಕಳೆದರೂ ನಗರದ ವಾರ್ಡ್ ಗಳಲ್ಲಿ ಹಲವು ರಸ್ತೆಗಳಲ್ಲಿನ ಮಳೆ ನೀರು ಹೊರಹೋಗದೆ ನಿಂತಿದ್ದು, ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಳ್ಳಾರಿ ನಗರದ ತಾಳುರು ರಸ್ತೆಯಾ ಭಗತ್ ಸಿಂಗ್ ನಗರ ಕೆಲ ರಸ್ತೆ ಗಳಪಾಡು,
>ಪ್ರಥಮ ಮಹಾ ಪೌರರ ವಾರ್ಡ್ ಕಥೆ, ಜನರ ಆಕ್ರೋಶ, ಅವರ ಬಾಯಿ ದಿಂದ ಕೇಳಬೇಕು.
ರಸ್ತೆಗಳಲ್ಲೇ ನೀರು ಸಂಗ್ರಹವಾಗಿರುವುದರಿಂದ ಜನರ ಓಡಾಟಕ್ಕೆ ತೊಂದರೆಯಾಗುವುದರ ಜೊತೆಗೆ, ಸೊಳ್ಳೆಗಳ ಕಾಟ ಹೆಚ್ಚಾಗಿ ರೋಗರುಜಿನಗಳ ಭೀತಿಯೂ ಎದುರಾಗಿದೆ.
ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದು ಹಾಗೂ ನೀರು ಸರಾಗವಾಗಿ ಹರಿದುಹೋಗಲು ಅಗತ್ಯ ಕ್ರಮ ಕೈಗೊಳ್ಳದಿರುವುದೇ ಸಮಸ್ಯೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸಮಸ್ಯೆ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಮಳೆ ಬಂದಾಗ ನೀರು ನಿಲ್ಲುವುದು ಅರ್ಥವಾಗುತ್ತದೆ,ಆದರೆ ಮಳೆ ನಿಂತು ದಿನಗಳಾದರೂ ನೀರು ಹೊರಹೋಗದಿರುವುದು ಯಾರ ನಿರ್ಲಕ್ಷ್ಯ?” ಎಂದು ಪ್ರಶ್ನಿಸಿರುವ ನಾಗರಿಕರು, ಸಮಸ್ಯೆ ಬಗೆಹರಿಸದ ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀರಿನ ಸಂಗ್ರಹದಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ವಿವಿಧ ರೋಗಗಳ ಭೀತಿ ಎದುರಾಗಿದ್ದು, ಕೂಡಲೇ ರಸ್ತೆ ಮತ್ತು ಚರಂಡಿ ವ್ಯವಸ್ಥೆಯನ್ನು ಸರಿಪಡಿಸಿ ನಿಂತಿರುವ ನೀರನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕೊನೆಗೆ ವಾರ್ಡ್ ಮಹಿಳೆ ಯರು ರಸ್ತೆ ಮೇಲೆ ನಿಂತ ಗಲೀಜ್ ನೀರು, ಹೊರಗಡೆ ಹಾಕಲು ಮುಂದೆ ಆಗಿದ್ದಾರೆ. ಸರ್ಕಾರ ಕ್ಕೆ ನಾಚಿಕೆ ಆಗುವ ಕೆಲಸ ಮಾಡಿದ್ದಾರೆ.
ಸುಳ್ಳು ಮಾತಾಗಳು ದಿಂದ,ಜನರಗೆ ನಾಮ ಹಾಕಿದರೆ, ಜನರ ಶಾಪ ಅವರ ಬಾಯಿ ದಿಂದ ಕೇಳಿ..













