This is the title of the web page
This is the title of the web page

Please assign a menu to the primary menu location under menu

State

ಕಾನೂನುಬದ್ಧ ದಾಖಲೆಗಳಿದ್ದರೂ ಕೃಷಿಗೆ ಅಡ್ಡಿ, ಭೂ ಬಕಾಸುರರಗೆ ಬಿಜೆಪಿ ರಕ್ಷಣೆ ಇದಿಯಾ,??. ರಾಮರಾವ್, ರಾಜಶೇಖರ್ ಆರೋಪ

ಕಾನೂನುಬದ್ಧ ದಾಖಲೆಗಳಿದ್ದರೂ ಕೃಷಿಗೆ ಅಡ್ಡಿ, ಭೂ ಬಕಾಸುರರಗೆ ಬಿಜೆಪಿ ರಕ್ಷಣೆ ಇದಿಯಾ,??. ರಾಮರಾವ್, ರಾಜಶೇಖರ್ ಆರೋಪ

ಕಾನೂನುಬದ್ಧ ದಾಖಲೆಗಳಿದ್ದರೂ ಕೃಷಿಗೆ ಅಡ್ಡಿ, ಭೂ ಬಕಾಸುರರಗೆ ಬಿಜೆಪಿ ರಕ್ಷಣೆ ಇದಿಯಾ,??.
ರಾಮರಾವ್, ರಾಜಶೇಖರ್ ಆರೋಪ
ಬಳ್ಳಾರಿ, ಜು. 15: ಸಂಡೂರು ತಾಲೂಕಿನ ಅಯ್ಯನಹಳ್ಳಿ ಕಂದಾಯ ಗ್ರಾಮದ ಸರ್ವೆ ನಂ. 20/2ರ 8.75 ಎಕರೆ ಕೃಷಿ ಭೂಮಿಯನ್ನು ಕಾನೂನುಬದ್ಧವಾಗಿ ಖರೀದಿಸಿದ್ದರೂ, ಭೂಮಿಗೆ ಪ್ರವೇಶ ನಿರಾಕರಿಸಿ ಕೃಷಿ ಚಟುವಟಿಕೆಗಳಿಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಕುಡತಿನಿ ನಿವಾಸಿ ಡಿ. ರಾಮರಾವ್ ಹಾಗೂ ರಾಜಶೇಖರ್ ಆರೋಪಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲ ವಾರಸುದಾರರಾದ ಶ್ರೀಮತಿ ಚಿಕ್ಕಮ್ಮ ಅವರಿಂದ ಸುಮಾರು 15 ವರ್ಷಗಳ ಹಿಂದೆ ಸದರಿ ಭೂಮಿಯನ್ನು ನೋಂದಾಯಿತ ಮಾರಾಟ ಪತ್ರದ ಮೂಲಕ ಖರೀದಿಸಿದ್ದು, ಪಹಣಿ, ಮ್ಯೂಟೇಶನ್, ಆರ್‌ಟಿಸಿ ಸೇರಿದಂತೆ ಎಲ್ಲಾ ಕಂದಾಯ ದಾಖಲೆಗಳು ತಮ್ಮ ಹೆಸರಿನಲ್ಲಿವೆ ಎಂದು ತಿಳಿಸಿದರು. ಇದೇ ಭೂಮಿಯ ಆಧಾರದ ಮೇಲೆ ಸಹಕಾರಿ ಬ್ಯಾಂಕಿನಿಂದ ₹9 ಲಕ್ಷ ಅಭಿವೃದ್ಧಿ ಸಾಲ ಪಡೆದಿರುವುದೂ ತಮ್ಮ ಹಕ್ಕಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಭೂಮಿಯನ್ನು ಖರೀದಿಸಿದ ಬಳಿಕ ನಾಲ್ಕು ಬೋರ್‌ವೆಲ್‌ಗಳನ್ನು ಕೊರೆಸಿ ಕೃಷಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗಿದೆ. ಇತ್ತೀಚೆಗೆ ಬೋರ್‌ವೆಲ್‌ಗೆ ನೀರು ದೊರೆತ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಹಾಗೂ ಹಿತೈಷಿಗಳೊಂದಿಗೆ ಪೂಜೆ ಸಲ್ಲಿಸಲು ತೆರಳಿದ ವೇಳೆ, ಲಿಂಗದಹಳ್ಳಿ ಗ್ರಾಮದ ಕೆಲವರು ಯಾವುದೇ ದಾಖಲೆಗಳನ್ನು ತೋರಿಸದೆ ತಮ್ಮನ್ನು ತಡೆದು ನಿಂದನೆ, ಬೆದರಿಕೆ ಹಾಗೂ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ, ತಾವು ಕೊರೆಸಿದ್ದ ಆರು ಬೋರ್‌ವೆಲ್‌ಗಳಲ್ಲಿ ಎರಡು ಬೋರ್‌ಗಳನ್ನು ಕಲ್ಲುಗಳಿಂದ ಮುಚ್ಚಿ ಹಾನಿಪಡಿಸಲಾಗಿದೆ ಎಂದು ದೂರಿದರು.
ವಿ.ಎಸ್. ಶಂಕರ್ ಅವರು ತಮ್ಮ ಕೃಷಿ ಭೂಮಿಯಲ್ಲಿ ಸಾಗುವಳಿ ಹಾಗೂ ಬಿತ್ತನೆ ಕಾರ್ಯಗಳನ್ನು ನಡೆಸಲು ನಿರಂತರವಾಗಿ ಅಡ್ಡಿಪಡಿಸುತ್ತಿದ್ದು, “ಹಣ ಕೊಡಿ ಅಥವಾ ಭೂಮಿ ಕೊಡಿ, ಇಲ್ಲದಿದ್ದರೆ ಒಕ್ಕಲೆಬ್ಬಿಸುತ್ತೇವೆ” ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ರಾಮರಾವ್ ಆರೋಪಿಸಿದರು.
ಶಂಕರ್ ಅವರ ಬಳಿ 1925ರ ದಾಖಲೆ ಹೊರತುಪಡಿಸಿ ಬೇರೆ ಯಾವುದೇ ಕಾನೂನುಬದ್ಧ ದಾಖಲೆಗಳಿಲ್ಲ. ಆದರೆ ತಮ್ಮ ಬಳಿ ನೋಂದಾಯಿತ ಖರೀದಿ ಪತ್ರ, ಕಂದಾಯ ದಾಖಲೆಗಳು, ಆರ್‌ಎಸ್ ದಾಖಲೆಗಳು ಹಾಗೂ ಹಣದ ಲೇವಾದೇವಿ ದಾಖಲೆಗಳು ಇವೆ ಎಂದು ಅವರು ತಿಳಿಸಿದರು.
ಘಟನೆ ನಡೆದ ತಕ್ಷಣ 112ಕ್ಕೆ ಕರೆ ಮಾಡಿ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಗಿದ್ದು, ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದರು. ಇದೇ ವ್ಯಕ್ತಿಗಳು ಇತ್ತೀಚೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದು, ಜಗಳವನ್ನು ಅವರೇ ಆರಂಭಿಸಿ ಈಗ ತಮ್ಮ ಮೇಲೆಯೇ ದೌರ್ಜನ್ಯ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ ಎಂದು ರಾಮರಾವ್ ಹಾಗೂ ರಾಜಶೇಖರ್ ದೂರಿದರು.
ನ್ಯಾಯಾಲಯದ ಆದೇಶ ಹಾಗೂ ಕಂದಾಯ ದಾಖಲೆಗಳ ಆಧಾರದ ಮೇಲೆ ತಮ್ಮ ಹೆಸರಿಗೆ ಹಕ್ಕು ಬದಲಾವಣೆಯಾಗಿರುವ ಭೂಮಿಯಲ್ಲಿ ಕೃಷಿ ನಡೆಸಲು ಅವಕಾಶ ಕಲ್ಪಿಸಿ, ತಮ್ಮ ಜೀವ ಹಾಗೂ ಆಸ್ತಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ವಿ.ಎಸ್. ಶಂಕರ್ ಸೇರಿದಂತೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ದಾಖಲೆಗಳ ಆಧಾರದ ಮೇಲೆ ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಅವರು ಅಧಿಕಾರಿಗಳನ್ನು ಆಗ್ರಹಿಸಿದರು.ಭೂ ಬಕಾಸುರರಗೆ,ಬಿಜೆಪಿ ರಕ್ಷಣೆ ನೀಡುತ್ತಿದ್ದಾರೆ ಅನ್ನುವ ಅನುಮಾನಗಳು, ಕಾಣುತ್ತವೆ, ಆ ಭಾಗದಲ್ಲಿ, ಎಷ್ಟೋ ಜನಕ್ಕೆ, ಮೋಸ ಮಾಡಿದ್ದಾರೆ,ಇಂಥಹ ಅವರನ್ನು ಪಾರ್ಟಿ ನಲ್ಲಿ ಇಟ್ಟುಕೊಳ್ಳಬಾರದು ಎಂದು ಅಗ್ರಹ ಮಾಡಿದ್ದರೆ.
ಸುದ್ದಿಗೋಷ್ಠಿಯಲ್ಲಿ ರಾಮರಾವ್, ರಾಜಶೇಖರ್, ವೆಂಕಟರಮಣ, ಮಹಾಂತೇಶ್, ಬಾಬು, ರುದ್ರಮ್ಮ ಹಾಗೂ ಪ್ರತಾಪ್ ಉಪಸ್ಥಿತರಿದ್ದರು.


News 9 Today

Leave a Reply