This is the title of the web page
This is the title of the web page

Please assign a menu to the primary menu location under menu

State

ಮಾಜಿ ಮೇಯರ್ ರಾಜೇಶ್ವರಿಯವರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ; ಭತ್ರಿ ಕಾಲುವೆ ಸ್ವಚ್ಛತೆಗೆ ಕ್ರಮ.

ಮಾಜಿ ಮೇಯರ್ ರಾಜೇಶ್ವರಿಯವರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ; ಭತ್ರಿ ಕಾಲುವೆ ಸ್ವಚ್ಛತೆಗೆ ಕ್ರಮ.

ಮಾಜಿ ಮೇಯರ್ ರಾಜೇಶ್ವರಿಯವರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ; ಭತ್ರಿ ಕಾಲುವೆ ಸ್ವಚ್ಛತೆಗೆ ಕ್ರಮ.

ಬಳ್ಳಾರಿ, ಆ.07: ಬಳ್ಳಾರಿ ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 34ರ ವ್ಯಾಪ್ತಿಯ ಭತ್ರಿ ಪ್ರದೇಶದ ಬಳಿ ಇರುವ ಕಾಲುವೆಯನ್ನು ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಸ್ವಚ್ಛಗೊಳಿಸಲಾಯಿತು.

ತಮ್ಮ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ನಾಗೇಂದ್ರ ಅವರಿಗೆ ಮಾಜಿ ಮೇಯರ್, ಪಾಲಿಕೆಯ ಸದಸ್ಯೆ ಎಂ.ರಾಜೇಶ್ವರಿ ಧನ್ಯವಾದ ಸಲ್ಲಿಸಿದ್ದಾರೆ.

ಶಾಂತಿ ನಗರದಿಂದ ಭತ್ರಿ ಗ್ರಾಮದವರೆಗೆ ಹಾದು ಹೋಗಿರುವ ತುಂಗಭದ್ರಾ ಜಲಾಶಯದ ಕಾಲುವೆ ಕಳೆದ ಹಲವು ದಿನಗಳಿಂದ ಕಸ, ಕಡ್ಡಿ, ಇತರೆ ತ್ಯಾಜ್ಯದಿಂದ ಹೂಳು ತುಂಬಿತ್ತು. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು. ಸದರಿ ವಿಷಯವನ್ನು ಪಾಲಿಕೆಯ 34ನೇ ವಾರ್ಡಿನ ಸದಸ್ಯೆ, ಮಾಜಿ ಮೇಯರ್ ಎಂ.ರಾಜೇಶ್ವರಿ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿಯವರ ಸೂಚನೆಯ ಮೇರೆಗೆ ರಾಜೇಶ್ವರಿಯವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಶುಕ್ರವಾರ ಬೆಳಿಗ್ಗೆ ಜೆಸಿಬಿ ಯಂತ್ರದ ಮೂಲಕ ಸ್ವಚ್ಛತಾ ಕಾರ್ಯ ನಡೆಯಿತು. ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.


News 9 Today

Leave a Reply