ಸಾಮಾನ್ಯರ ಬದುಕಿಗೆ ಸ್ಪಂಧಿಸುವ ಹಾಗೂ ಸಮಾಜದ ಅಂಕುಡೊಕು ತಿದ್ದುವ ಪತ್ರಕರ್ತರು ಅನೇಕ ತೊಂದರೆ ಅನುಭವಿಸುತ್ತಿದ್ದಾರೆ.

ಬಳ್ಳಾರಿ /ಕುರುಗೋಡು(10)
ಜಗತ್ತಿನ ಪ್ರಸ್ತುತ ವಿದ್ಯಾಮಾನಗಳ ವಿಚಾರ, ಚಿಂತನೆಗಳನ್ನು ತಿಳಿಸುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದು ಕೊಟ್ಟೂರುಸ್ವಾಮಿ ಶಾಖಾ ಮಠದ ಪರಮಪೂಜ್ಯ ನಿರಂಜನ ಪ್ರಭು ಮಹಾಸ್ವಾಮಿಗಳು ತಿಳಿಸಿದರು.
ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕಾರಂಗ ಪ್ರಜಾಪ್ರಭುತ್ವದ ರಕ್ಷಣೆ ಮಾಡುತ್ತಿದೆ. ಆದರೆ ಸ್ಥಳೀಯ ಪತ್ರಕರ್ತರು ಉತ್ತಮ ವರಿದಿಗಾರಿಕೆ ಮೂಲಕ ಸಮಾಜದ ಸ್ವಾಥ ರಕ್ಷಿಸುತ್ತಿದ್ದಾರೆ. ಇಂತಹ ಪತ್ರಕರ್ತರ ರಕ್ಷಣೆಗೆ ಸರಕಾರ ಮುಂದಾಗುವ ಅವಶ್ಯಕತೆವಿದೆ. ಅಧುನಿಕ ಯುಗದಲ್ಲಿ ಮಾನವೀಯ ಮೌಲ್ಯಗಳು, ವಿಚಾರ, ಚಿಂತನೆಗಳು ಕಣ್ಮರೆಯಾಗುತ್ತಿವೆ. ಇಂತಹ ವಿಚಾರ, ಚಿಂತನ ಕವಿಗೋಷ್ಠಿ ಕಾರ್ಯಕ್ರಮ ಹೆಚ್ಚು ಹೆಚ್ಚು ಹಮ್ಮಿಕೊಳ್ಳುವ ಮೂಲಕ ಸ್ವಾಸ್ಥö್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ಹೆಚ್.ವೀರಾಪುರ ಮಠದ ಶ್ರೀ ಜಡೇಶ ತಾತಾ ಮಾತನಾಡಿ, ಸಮಾಜಕ್ಕೆ ನಿತ್ಯ ವಿಷಯ ತಿಳಿಸುವ ಪತ್ರಕರ್ತರ ಬುದಕು ಅತಂತ್ರ ಸ್ಥಿಯಲ್ಲಿದೆ. ಸಂವಿಧಾನದ ನಾಲ್ಕನೇ ಅಂಗ ಎನ್ನುವ ಪತ್ರಕರ್ತರ ಬದುಕೇ ಅತಂತ್ರ ಸ್ಥಿತಿಯಲ್ಲಿದ್ದಾಗ ಸಮಾಜದ ಸ್ಥಿತಿ ಎಂತಿರಬಹುದು ಎಂಬುದನ್ನು ಊಹಿಸಬೇಕಿದೆ. ಪತ್ರಿಕೆ ಇಲ್ಲವೆ ಪತ್ರಕರ್ತರು ಇಲ್ಲದಿದ್ದರೆ ಸಮಾಜದ ಸ್ಥಿತಿ ಏನಾಗಬಹುದು ಎಂಬುವುದನ್ನು ನೆನಪಿಸಿಕೊಳ್ಳಲೂ ಸಾದ್ಯವಿಲ್ಲ. ಹಾಗಾಗಿ ನಿರಂತರ ಸಮಾಜದಲ್ಲಿ ಜರುಗುತ್ತಿರುವ ಅನ್ಯಾಯ, ಭ್ರಷ್ಟಾಚಾರ ನಿಯಂತ್ರಿಸುವ ಮೂಲಕ ಸದೃಢ ಸಮಾಜದ ನಿರ್ಮಣಕ್ಕೆ ಪಣ ತೊಟ್ಟು ನಿಂತಿರುವ ಪತ್ರಕರ್ತರ ಉಳಿವಿಗಾಗಿ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಘದ ಜಿಲ್ಲಾಧ್ಯಕ್ಷ ಯಳ್ಪಿ ವಲಿಭಾಷಾ ಮಾತನಾಡಿ, ಪ್ರತಿಯೊಬ್ಬ ಪತ್ರಕರ್ತರು ಅನ್ಯಾಯದ ವಿರುದ್ಧ ಧೈರ್ಯದಿಂದ ಹಾಗೂ ನಿಷ್ಪಕ್ಷಪಾತವಾಗಿ ಸುದ್ದಿ ಮಾಡಲು ಮುಂದಾಗಬೇಕು. ಆಗ ಸಮಾಜದ ಸುವ್ಯವಸ್ಥೆ ಕಾಪಾಡಲು ಸಾಧ್ಯ ಎಂದರು.
ಸಂಘದ ಅಧ್ಯಕ್ಷ ಎಂ.ಅಣ್ಣಯ್ಯ ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಶಾಂತಲಾ ಮತ್ತು ಪಿಯು ಕಾಲೇಜಿನ ಪ್ರಾಂಶುಪಲ ಡಾ. ಎನ್‌ಎಸ್.ವೇಣೂಗೋಪಾಲ ಮಾತನಾಡಿದರು.
ವೇದಿಕೆಯಲ್ಲಿ ೧೦ನೇ ತರಗತಿ, ಪಿಯುಸಿ, ಪದವಿ ಹಾಗೂ ಸಿಇಟಿ ಯಲ್ಲಿ ರ‍್ಯಾಂಕ್ ಪಡೆದು ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಬಜಾರಪ್ಪ, ಕೆ.ವೀರಭದ್ರಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದುರ್ಗೆಶ್ ಯಾದವ್, ಸಿರುಗುಪ್ಪ ಅಧ್ಯಕ್ಷ ಅಲಾಂಭಾಷಾ, ಮುಖಂಡ ಸದಾಶಿವಸ್ವಾಮಿ, ಚಾನಾಳ ಅಂಬರೀಶ್, ಸಂಘದ ಸದಸ್ಯರಾದ ಎನ್.ಬಸವರಾಜ, ನಾಗಲಿಂಗಸ್ವಾಮಿ, ಲೋಕೇಶ್, ಸಿದ್ದಪ್ಪ, ರಾಜಸಾಬ್, ಆಶೋಕ್, ಶೇಖರ್, ಪಟ್ಟಣದ ಮತ್ತು ಸಂಘ ಸಂಸ್ಥೆಗಳ ಮುಖಂಡರು ಹಾಗೂ ಪದವಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.













