ಎಸ್‌ಆರ್‌ಎಂ ಲೇಔಟ್‌ನಲ್ಲಿ ಕುಡಿಯುವ ನೀರಿನ ವಾಲ್ವ್ ಸೋರಿಕೆ: ದುರಸ್ತಿಗೆ ಸಾರ್ವಜನಿಕರಿಂದ ಹಣ ಕೇಳುತ್ತಿದ್ದಾರೆ ಎಂಬ ಆರೋಪ!!.ಗೋವಿಂದ ಗೋವಿಂದಾ..
ಬಳ್ಳಾರಿ, ಜು. 28: ನಗರದ ತಾಳೂರು ರಸ್ತೆಯ ಬಾಲಭಾರತಿ ಶಾಲೆ ಪಕ್ಕದ ಕಬ್ಬಿನ ಹಾಲಿನ ಮಿಷನ್ ಸಮೀಪ ಇರುವ ಎಸ್‌ಆರ್‌ಎಂ ಲೇಔಟ್‌ನಲ್ಲಿ ಕುಡಿಯುವ ನೀರಿನ ವಾಲ್ವ್ ಸೋರಿಕೆಯಿಂದ ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ವಾಲ್ವ್ ಹಾನಿಗೊಳಗಾಗಿರುವುದರಿಂದ ಹಲವು ದಿನಗಳಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗದೆ ಜನರು ಪರದಾಡುವಂತಾಗಿದೆ.
ಸ್ಥಳೀಯ ನಿವಾಸಿಗಳ ಪ್ರಕಾರ, ಸಮಸ್ಯೆ ಕುರಿತು ಪಾಲಿಕೆ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದಿದ್ದರೂ ಇದುವರೆಗೆ ದುರಸ್ತಿ ಕಾರ್ಯ ಕೈಗೊಂಡಿಲ್ಲ.
ಅಲ್ಲದೆ, ವಾಲ್ವ್ ದುರಸ್ತಿ ಮಾಡಿಸಬೇಕಾದರೆ ಸಾರ್ವಜನಿಕರೇ ಹಣ ನೀಡಿ ಮಾಡಿಸಿಕೊಳ್ಳಬೇಕು ಅಥವಾ ಖಾಸಗಿ ವ್ಯಕ್ತಿಗಳ ಮೂಲಕ ದುರಸ್ತಿ ಮಾಡಿಸಬೇಕು ಎಂಬ ಉತ್ತರವನ್ನು ಅಧಿಕಾರಿಗಳು, ಕೆಲ ಆಪ್ತರು ಗಳು,ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪರಿಸ್ಥಿತಿ ಎಲ್ಲಿಗೆ ಬಂತು, ಜನರ ಪಾಡು ಏನು.
ಈಗಾಗಲೇ ಇದೇ ಅವೈಜ್ಞಾನಿಕ ವಾಗಿ ಮಾಡಿದ್ದ ಈ ಪ್ರದೇಶದಲ್ಲಿ ನೀರು ಸರಬರಾಜು ಮಾಡುವು ಪೈಪ್ ಸುಟ್ಟ ಹೋಗಿತ್ತು, ಅದನ್ನು ಕೂಡ, ಅಲ್ಲಿಯಾ ನಿವಾಸಿಗಳು, ತಮ್ಮ ಹಣ ದಿಂದಲೇ ಸರಿಪಡಿಸಿ ಕೊಂಡಿದ್ದಾರೆ.
ಸಾರ್ವಜನಿಕರ ತೆರಿಗೆ ಹಣದಿಂದಲೇ ಮೂಲಭೂತ ನಾಗರಿಕ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿ ಪಾಲಿಕೆಗೆ ಇದೆ.
ಇಂತಹ ಸಂದರ್ಭದಲ್ಲಿ ಕುಡಿಯುವ ನೀರಿನ ವಾಲ್ವ್ ದುರಸ್ತಿಗೂ ಸಾರ್ವಜನಿಕರಿಂದ ಹಣ ಕೇಳುವುದು ಎಷ್ಟು ಸಮಂಜಸ ಎಂಬ ಪ್ರಶ್ನೆಯನ್ನು ಸ್ಥಳೀಯರು ಎತ್ತಿದ್ದಾರೆ.
“ನಾವು ನಿಯಮಿತವಾಗಿ ತೆರಿಗೆ ಪಾವತಿಸುತ್ತಿದ್ದೇವೆ. ಆದರೂ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮತ್ತೆ ನಮ್ಮ ಜೇಬಿನಿಂದಲೇ ಹಣ ಖರ್ಚು ಮಾಡಬೇಕೇ?” ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆಯಿಂದ ಎಸ್‌ಆರ್‌ಎಂ ಲೇಔಟ್‌ನ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಪಾಲಿಕೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ವಾಲ್ವ್ ದುರಸ್ತಿ ಕಾರ್ಯ ಕೈಗೊಂಡು ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಪಬ್ಲಿಕ್ ದಿಂದ ಹಣ ಕೇಳಿದ್ದು ಯಾರು ಅನ್ನೋದು ತಿಳಿಯಬೇಕು ಆಗಿದೆ. ಹಣ ಕೇಳಿದ್ದ ವ್ಯಕ್ತಿ ಗ್ರೂಪ್ ನಲ್ಲಿ ಅಡೀಯೋ ಮೂಲಕ ಕೇಳಿದ್ದಾರೆ, ಇದು ಮಹಾಪರಾಧ,ಕಾಂಗ್ರೆಸ್ ಪಾರ್ಟಿ ಗೆ ಮತ್ತೊಂದು ಅವಮಾನ ಆಗಲಿದೆ.













