ನೂತನವಾಗಿ ಆರಂಭವಾಗುವ ಹೊಸಪೇಟೆ ಅರಸೀಕೆರೆ ಹೊಸಪೇಟೆ ವಿಶೇಷ ಡೆಮೋ ರೈಲು
ಬಳ್ಳಾರಿ ಇಂದ ಸಂಚರಿಸಲು ಒತ್ತಾಯ.
ಬಳ್ಳಾರಿ(28)
ರೈಲ್ವೆ ಇಲಾಖೆಗೆ ಸಾವಿರಾರು ಕೋಟಿ ರೂಪಾಯಿಗಳ ಆದಾಯ ತರುವ ಬಳ್ಳಾರಿಯ ರೈಲ್ವೇ ಪ್ರದೇಶಗಳನ್ನು ದಕ್ಷಿಣ ಮಧ್ಯ ರೈಲ್ವೆಯ ಗುಂತಕಲ್ ವಿಭಾಗದಿಂದ ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗಕ್ಕೆ ಸೇರಿಸಲು ನಮ್ಮ ಸಮಿತಿ 188 ದಿನಗಳ ಸತ್ಯಗ್ರಹ ಬಳ್ಳಾರಿಯಲ್ಲಿ ನಡೆಸಿದನಂತರ ಬಳ್ಳಾರಿ ರೈಲ್ವೆ ಪ್ರದೇಶಗಳು ನೂತನವಾಗಿ ರಚನೆಯಾದ ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯಕ್ಕೆ ಸೇರ್ಪಡೆಯಾದವು ಬಳ್ಳಾರಿ ಭಾಗದ ಜನತೆಯ ನಿರೀಕ್ಷೆಯಂತೆ ಹೆಚ್ಚಿನ ರೈಲುಗಳು ಬಳ್ಳಾರಿ ಮಾರ್ಗವಾಗಿ ಸಂಚರಿಸುತ್ತಿಲ್ಲ
ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳು
ಬಳ್ಳಾರಿ ಮಾರ್ಗದಲ್ಲಿ ಕೇವಲ ಗೂಡ್ಸ್ ರೈಲುಗಳ ಸಂಚಾರಕ್ಕೆ ಹೆಚ್ಚಿನ ಮಹತ್ವ ನೀಡಿ ಪ್ರಯಾಣಿಕರ ರೈಲುಗಳಿಗೆ ಅವಕಾಶ ನೀಡುತ್ತಿಲ್ಲ
ಬಳ್ಳಾರಿ ರೈಲ್ವೆ ಅಭಿವೃದ್ಧಿ ಬಗ್ಗೆ ರೈಲ್ವೆ ಇಲಾಖೆ ಮಲತಾಯಿ ಧೋರಣೆ ತೋರುತ್ತಿರುವುದೆಂಬುವುದಕ್ಕೆ ಸಾಕ್ಷಿ ನೂತನವಾಗಿ ಆರಂಭವಾಗುವ ಹೊಸಪೇಟೆ ಅರಸೀಕೆರೆ ಹೊಸಪೇಟೆ ಡೆಮೋ ವಿಶೇಷ ರೈಲು.
ರೈಲು ಸಂಖ್ಯೆ 07343 ಹೊಸಪೇಟೆ ಅರಸೀಕೆರೆ ಉದಯ 6.30 ಕ್ಕೆ ಹೊಸಪೇಟೆಯಿಂದ ಹೊರಟು ಮಧ್ಯಾಹ್ನ 2:20 ಕ್ಕೆ ಅರಸೀಕೆರೆ ತಲುಪುತ್ತದೆ.
ರೈಲು ಸಂಖ್ಯೆ 07344 ಮಧ್ಯಾಹ್ನ 2:30ಕ್ಕೆ ಅರಸೀಕೆರೆಯಿಂದ ಹೊರಟು ರಾತ್ರಿ 9:30 ಕ್ಕೆ ಹೊಸಪೇಟೆ ತಲುಪುತ್ತದೆ.
ಹೊಸಪೇಟೆ ಅರಸೀಕೆರೆ ಡೆಮೋ ರೈಲನ್ನು ಬಳ್ಳಾರಿಯಿಂದ ನಸುಕಿನ 5:00 ಗೆ ಆರಂಭಿಸಬೇಕಾಗಿ ಸಮಿತಿ ಒತ್ತಾಯಿಸುತ್ತದೆ.
ಇದರಿಂದ ಬಳ್ಳಾರಿ ಭಾಗದ ಜನತೆ ಹೊಸಪೇಟೆ ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹರಪನಹಳ್ಳಿ, ದಾವಣಗೆರೆ, ಕಡೂರು, ಬೀರೂರು, ಅರಸಿಕೆರೆ, ಕಡೆಗೆ ಹೋಗಲು ಸಹಾಯವಾಗುತ್ತದೆ
ಈ ರೈಲಿನಲ್ಲಿ ಉದಯ 9:55ಕ್ಕೆ ದಾವಣಗೆರೆಯಲ್ಲಿ ಇಳಿದ ಪ್ರಯಾಣಿಕರಿಗೆ ಅಲ್ಲಿಂದ ಬೆಂಗಳೂರಿಗೆ ವಿಶ್ವಮಾನವ ಎಕ್ಸ್ಪ್ರೆಸ್ ರೈಲಿನ ಮೂಲಕ ಸಂಜೆ ಬೆಂಗಳೂರಿಗೆ ತಲುಪಬಹುದಾಗಿದೆ ಅಲ್ಲದೆ ಈ ರೈಲಿನಲ್ಲಿ ಕಡೂರಿನಲ್ಲಿ ಇಳಿದು ಧರ್ಮಸ್ಥಳಕ್ಕೆ ಹೋಗಲು ಪ್ರವಾಸಿಗರಿಗೆ ಅನುಕೂಲವಾಗುತ್ತದೆ.
ಉದಯ 11:50 ಕ್ಕೆ ಬೆಂಗಳೂರಿಂದ ಹೊರಡುವ ವಿಶೇಷ ರೈಲಿನಲ್ಲಿ ಬಳ್ಳಾರಿ ಕಡೆಗೆ ಬರುವ ಪ್ರಯಾಣಿಕರಿಗೆ ದಾವಣಗೆರೆಯಲ್ಲಿ ಸಂಜೆ 5 ಗಂಟೆಗೆ
ಅರಸೀಕೆರೆ ಹೊಸಪೇಟೆ ಡೆಮೋ ರೈಲುರೈಲು ಸಂಪರ್ಕ ಕಲ್ಪಿಸುತ್ತದೆ ಜೊತೆಗೆ ಅರಸೀಕೆರೆಯಿಂದ ಹೊಸಪೇಟೆ ಮಾರ್ಗದಲ್ಲಿ ಬರುವ ಎಲ್ಲಾ ರೈಲು ನಿಲ್ದಾಣಗಳಿಂದ ಬಳ್ಳಾರಿಗೆ ಪ್ರಯಾಣಿಕರು ಬರಲು ಸೌಲಭ್ಯ ದೊರೆಯುತ್ತದೆ
ರಾತ್ರಿ 9:30 ಕ್ಕೆ ಹೊಸಪೇಟೆ ತಲುಪುವ ಡೆಮೋ ರೈಲು 11:00ಗೆ ಬಳ್ಳಾರಿ ತಲುಪಿ ಪ್ಲಾಟ್ಫಾರಂ 1 ಎ ನಲ್ಲಿ ನಿಲುಗಡೆ ಮಾಡಿ ರಾತ್ರಿಯ ಸಮಯದಲ್ಲಿ ರೈಲಿನ ಸ್ವಚ್ಛತೆ ಮಾಡಬಹುದಾಗಿದೆ
ಕಾರಣ ಬಳ್ಳಾರಿ ಪ್ರಯಾಣಿಕರ ದೃಷ್ಟಿಯಿಂದ ಹೊಸಪೇಟೆ ಅರಸಿಕೆರೆ ಹೊಸಪೇಟೆ ಡೆಮೊ ರೈಲನ್ನು ಬಳ್ಳಾರಿಯಿಂದ ಆರಂಭಿಸುವಂತೆ ಒತ್ತಾಯಿಸುತ್ತೆನೆ
ದಿನಾಂಕ 28/8/2026 ರಿಂದ ಆರಂಭವಾಗುವ ಹೊಸಪೇಟೆ ಅರಸೀಕೆರೆ ಹೊಸಪೇಟೆ ಡೆಮೋ ರೈಲನ್ನು ಬಳ್ಳಾರಿಯಿಂದ ಆರಂಭವಾಗುವಂತೆ ನೈರುತ್ಯ ರೈಲ್ವೆ ಅಧಿಕಾರಿಗಳು ಕೊಡಲೇ ಕ್ರಮ ವಹಿಸಬೇಕಾಗಿ ಬಳ್ಳಾರಿ ಜಿಲ್ಲೆಯ ಜನತೆಯ ಪರವಾಗಿ ಸಮಿತಿ ಕೆಎಂ ಮಹೇಶ್ವರ ಸ್ವಾಮಿ
ಅಧ್ಯಕ್ಷರು

ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ
ಒತ್ತಾಯಿಸುತ್ತಿದ್ದಾರೆ .
ಕೆಎಂ ಮಹೇಶ್ವರ ಸ್ವಾಮಿ
ಅಧ್ಯಕ್ಷರು
ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ.