This is the title of the web page
This is the title of the web page

Please assign a menu to the primary menu location under menu

State

ಬಳ್ಳಾರಿಯಲ್ಲಿ ಕಲುಷಿತ ಕೆಂಪು ನೀರು ಪೂರೈಕೆ: ಪಾಲಿಕೆ ವಿರುದ್ಧ ಜನಾಕ್ರೋಶ ಕುಡಿಯಲು ಯೋಗ್ಯವಲ್ಲದ ನೀರಿನಿಂದ ಜನರಲ್ಲಿ ಆತಂಕ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಠಿಣ ಕ್ರಮಕ್ಕೆ ಆಗ್ರಹ.

ಬಳ್ಳಾರಿಯಲ್ಲಿ ಕಲುಷಿತ ಕೆಂಪು ನೀರು ಪೂರೈಕೆ: ಪಾಲಿಕೆ ವಿರುದ್ಧ ಜನಾಕ್ರೋಶ ಕುಡಿಯಲು ಯೋಗ್ಯವಲ್ಲದ ನೀರಿನಿಂದ ಜನರಲ್ಲಿ ಆತಂಕ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಠಿಣ ಕ್ರಮಕ್ಕೆ ಆಗ್ರಹ.

ಬಳ್ಳಾರಿಯಲ್ಲಿ ಕಲುಷಿತ ಕೆಂಪು ನೀರು ಪೂರೈಕೆ: ಪಾಲಿಕೆ ವಿರುದ್ಧ ಜನಾಕ್ರೋಶ
ಕುಡಿಯಲು ಯೋಗ್ಯವಲ್ಲದ ನೀರಿನಿಂದ ಜನರಲ್ಲಿ ಆತಂಕ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಠಿಣ ಕ್ರಮಕ್ಕೆ ಆಗ್ರಹ.

ಬಳ್ಳಾರಿ, ಆ.27: ನಗರದ ತಾಳುರು ರಸ್ತೆ, ಭಗತ್‌ಸಿಂಗ್ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಆ.26ರಂದು ಮಹಾನಗರ ಪಾಲಿಕೆಯಿಂದ ಪೂರೈಕೆಯಾದ ಕುಡಿಯುವ ನೀರು ಕೆಂಪು ಬಣ್ಣದಲ್ಲಿ, ಕಲುಷಿತ ಸ್ಥಿತಿಯಲ್ಲಿ ಹರಿದು ಬಂದಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಶುದ್ಧ ಕುಡಿಯುವ ನೀರಿಗಾಗಿ ಕಾಯುತ್ತಿದ್ದ ಜನರಿಗೆ ಕಲುಷಿತ ನೀರು ಪೂರೈಕೆಯಾಗಿರುವುದು ಪಾಲಿಕೆಯ ಕಾರ್ಯವೈಖರಿ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.

ಮನೆಯ ನಲ್ಲಿಗಳಲ್ಲಿ (ಟ್ಯೂಪ್ )ಹರಿದು ಬಂದ ನೀರು ಸಾಮಾನ್ಯವಾಗಿ ಕಾಣದೆ ಕೆಂಪು ಬಣ್ಣಕ್ಕೆ ತಿರುಗಿದ್ದು, ನೀರಿನಲ್ಲಿ ಕಲ್ಮಶ ಹಾಗೂ ಅಶುದ್ಧತೆ ಕಂಡುಬಂದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇಂತಹ ನೀರನ್ನು ಕುಡಿಯುವುದಿರಲಿ, ಅಡುಗೆ ಹಾಗೂ ದೈನಂದಿನ ಬಳಕೆಗೂ ಬಳಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ನೀರು ಸೇವಿಸಿದ ಕೆಲವರು ಅಸ್ವಸ್ಥರಾಗಿ ಆಸ್ಪತ್ರೆಗೆ ತೆರಳಿರುವ ಘಟನೆಗಳೂ ನಡೆದಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರ ಆರೋಗ್ಯದೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಕುಡಿಯುವ ನೀರಿನ ಪೂರೈಕೆಯಲ್ಲಿ ಇಂತಹ ಗಂಭೀರ ಲೋಪ ಉಂಟಾಗಿರುವುದು ಖಂಡನೀಯ.

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನೀರಿನ ಪೈಪ್‌ಲೈನ್‌ಗಳನ್ನು ನಿರ್ಮಿಸಿ, ಮನೆಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಿದ್ದರೂ, ಜನರ ನಲ್ಲಿಗಳಿಗೆ ಕಲುಷಿತ ನೀರು ಹರಿದುಬರುತ್ತಿರುವುದಾದರೇ ಕಾಮಗಾರಿ ಹಾಗೂ ನೀರು ಸರಬರಾಜು ವ್ಯವಸ್ಥೆಯ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಮನುಷ್ಯರು ಕುಡಿಯಲು ಸಾಧ್ಯವಾಗದಷ್ಟು ಕಲುಷಿತವಾಗಿರುವ ನೀರನ್ನು ಪೂರೈಸಿರುವುದು ಅಧಿಕಾರಿಗಳ ನಿರ್ಲಕ್ಷ್ಯದ ಪರಾಕಾಷ್ಠೆ.

ಈ ನೀರು ಸಾಕುಪ್ರಾಣಿಗಳ ಆರೋಗ್ಯಕ್ಕೂ ಅಪಾಯಕಾರಿಯಾಗುವ ಸಾಧ್ಯತೆಯಿದೆ.

ಜನರ ಜೀವದೊಂದಿಗೆ ಚೆಲ್ಲಾಟವಾಡುವಂತಹ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಸಹಿಸಬಾರದು” ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

ನೀರು ಕಲುಷಿತವಾಗಲು ಕಾರಣವೇನು,ಯಾವ ಪ್ರದೇಶದಲ್ಲಿ ಪೈಪ್‌ಲೈನ್ ದೋಷ ಉಂಟಾಗಿದೆ, ಚರಂಡಿ ನೀರು ಕುಡಿಯುವ ನೀರಿನ ಪೈಪ್‌ಗೆ ಸೇರ್ಪಡೆಯಾಗಿದೆಯೇ ಅಥವಾ ನೀರು ಸಂಗ್ರಹಣೆ ಹಾಗೂ ಪೂರೈಕೆ ವ್ಯವಸ್ಥೆಯಲ್ಲಿ ಲೋಪವಾಗಿದೆಯೇ ಎಂಬುದನ್ನು ಪಾಲಿಕೆ ಅಧಿಕಾರಿಗಳು ತಕ್ಷಣ ಪರಿಶೀಲಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಘಟನೆ ನಡೆದರೂ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸದೆ ಕಣ್ಣುಮುಚ್ಚಿ ಕುಳಿತಿರುವಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಜನರ ಆರೋಗ್ಯಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ಕುಡಿಯುವ ನೀರು ಪೂರೈಕೆಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕಲುಷಿತ ನೀರಿನ ಮಾದರಿಗಳನ್ನು ತಕ್ಷಣ ಪ್ರಯೋಗಾಲಯಕ್ಕೆ ಕಳುಹಿಸಿ ಗುಣಮಟ್ಟ ಪರೀಕ್ಷೆ ನಡೆಸಬೇಕು. ಅಲ್ಲದೆ, ಪೈಪ್‌ಲೈನ್‌ಗಳನ್ನು ಪರಿಶೀಲಿಸಿ ದೋಷ ಕಂಡುಬಂದಲ್ಲಿ ಕೂಡಲೇ ಸರಿಪಡಿಸಬೇಕು.

ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಪರಿಹಾರ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಜನರ ಜೀವ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಕುಡಿಯುವ ನೀರಿನ ವಿಚಾರದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯಕ್ಕೆ ಅವಕಾಶ ನೀಡಬಾರದು. ಈ ಪ್ರಕರಣಕ್ಕೆ ನಿಖರ ಕಾರಣ ಪತ್ತೆಹಚ್ಚಿ, ಹೊಣೆಗಾರರ ವಿರುದ್ಧ ಕ್ರಮ ಕೈಗೊಂಡು, ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಶುದ್ಧ ಕುಡಿಯುವ ನೀರು ಪೂರೈಸುವಂತೆ ಮಹಾನಗರ ಪಾಲಿಕೆ ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒಕ್ಕೊರಲಿನ ಆಗ್ರಹವಾಗಿದೆ. ಈ ಹಿಂದೆ ಕುಡಿಯುವ ನೀರಿನ ನಾಲುಗಳಲ್ಲಿ ಡ್ರೈನೇಜ್ ನೀರು ಕೂಡ ಮಿಕ್ಸ್ ಆಗಿ ಪೂರೈಕೆಯಾಗಿದ್ದು ಎಷ್ಟೋ ಬಾರಿ ಜನರು ಆಕ್ರೋಶ ಗೊಂಡಿದ್ದಾರೆ. ಈಗಾಗಲೇ ಬಹುತೇಕ, ನಗರದಲ್ಲಿ ರಾಜಾರೋಷವಾಗಿ ಮಿನರಲ್ ಡ್ರಿಂಕಿಂಗ್ ವಾಟರ್ ಕಂಪನಿಗಳ ಹಾವಳಿ ದೊಡ್ಡಮಟ್ಟದಲ್ಲಿದೆ ಬೀದಿ ಬೀದಿಯಲ್ಲಿ ಫಿಲ್ಟರ್ ವಾಟರ್ ಮಾಡಿಕೊಂಡಿದ್ದಾರೆ ಅವು ಯಾವುವು ಕೂಡ ಅಧಿಕೃತವೋ ಅನಧಿಕೃತವೋ ಅನ್ನುವುದು ಮಾಹಿತಿ ಇಲ್ಲ. ಪಾಲಿಕೆಯಲ್ಲಿ ಈಗಾಗಲೇ ನೂರಾರು ಭ್ರಷ್ಟಾಚಾರ ಪ್ರಕರಣಗಳು ಲೂಟಿ ರಾಜ ರೋಷವಾಗಿ ನಡೆಯುತ್ತಿರುವುದು ಕೂಡ ಪಾಲಿಕೆ ವಿಫಲತೆ ಎನ್ನುವುದು ಕಂಡುಬರುತ್ತದೆ ಅದೇ ರೀತಿಯಾಗಿ ಕುಡಿಯುವ ನೀರಿನ ವಿಚಾರದಲ್ಲಿ ಕೂಡ ಫಿಲ್ಟರ್ ವಾಟರ್ ಮಾಲೀಕರುಗಳ ಜೊತೆ ಏನಾದರೂ ಹಣದ ಆಸೆಗೆ ಒಪ್ಪಂದ ಮಾಡಿಕೊಂಡು ನಾಗರಿಕರಿಗೆ ಕಲಿಸುತ ನೀರನ್ನು ಕಲುಷಿತ ನೀರನ್ನು ಪೂರೈಕೆ ಮಾಡುತ್ತಿದ್ದಾರೆ ಅನ್ನುವುದು ಅನುಮಾನಗಳು ಒಪ್ಪಿಕೊಂಡಿವೆ ಅನೇಕ ವಿಚಾರಗಳಲ್ಲಿ ಮಹಾನಗರ ಪಾಲಿಕೆ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ.

ಇಲ್ಲಿಯ ಆಡಳಿತ ಅಧಿಕಾರಿಗಳಗೆ ಕಿಂಚೆತ್ತು ಜವಾಬ್ದಾರಿ ಇಲ್ಲ, ಪಾಲಿಕೆಯಲ್ಲಿ ಸಂಪೂರ್ಣ ಜನರ ಹಿತಾಸಕ್ತಿಯನ್ನು ನಾಶಮಾಡಿಕೊಂಡು, ಕೆಟ್ಟ ರಾಜಕಾರಣವನ್ನು ಮಾಡಿಕೊಳ್ಳುತ್ತ, ಜನರ ಆರೋಗ್ಯದಮೇಲೆ ಪರಿಣಾಮ ಬೀಳುವಂತೆ ವರ್ತನ ಮಾಡುತ್ತಿರುವುದು ಬಹು ದುಡ್ಡು ಅಪಾಯಕಾರಿ ವಿಚಾರವಾಗಿದೆ.

ಒಂದು ದಿನ ಜನರು ಪಾಲಿಕೆಗೆ ನುಗ್ಗಿದರೂ ಅವಾಂತರಗಳು ಸೃಷ್ಟಿ ಮಾಡಿದರು ಆಶ್ಚರ್ಯ ಪಡೆಯುವಂತಿಲ್ಲ.

ಇದೇ ಮುಂದುವರಿದರೆ ಸಾರ್ವಜನಿಕರ ಪ್ರದೇಶ ಗಳುಗೆ ಜನಪ್ರತಿನಿಧಿಗಳು ಹೋದರೆ ಅವರು ಅಲ್ಲಿ ಜನರಾಕೋಶಕ್ಕೆ ಚೀಮಾರಿ ಹಾಕಿಸಿಕೊಳ್ಳುವ ವಾತಾವರಣ ಸೃಷ್ಟಿಯಾಗುತ್ತೆ.

>ಜನಪ್ರತಿನಿಧಿಗಳು ನಾವು ಸಚಿವರಾಗಬೇಕು, ಮಹತ್ತರ ಖಾತೆ ಬೇಕು , ಹಗರಣಗಳಿಂದ ಪಾರಾಗಬೇಕು, ಹಣಗಳಿಸಬೇಕು, ಸೆಟಲ್ ಮೆಂಟ್ ಗಳು ಮಾಡಬೇಕು,ಅನ್ನುವ ಗುರಿಯಲ್ಲೇ ಬ್ಯುಸಿಯಾಗಿರುವುದರಿಂದ, ಸಾರ್ವಜನಿಕರಿಗೆ ಸೇವೆ ಸಲ್ಲಿಸುವುದನ್ನು ಸಂಪೂರ್ಣ ಬದಿಗಿಟ್ಟು ಓಡಾಡುತ್ತಿರುವುದು, ಗೊತ್ತು ಆಗಿದೆ.


News 9 Today

Leave a Reply