This is the title of the web page
This is the title of the web page

Please assign a menu to the primary menu location under menu

State

ಜೆಸ್ಕಾಂ ಇಲಾಖೆಯಲ್ಲಿ ನಿಲ್ಲದ ಭ್ರಷ್ಟಾಚಾರ!! ಕಮರ್ಷಿಯಲ್ ಮಳಿಗೆಗಳಿಗೆ ಅಳವಡಿಸಿದ್ದ 35 ವಿದ್ಯುತ್ ಮೀಟರ್ ಗಳು ತೆರುವು. ಪ್ರಕರಣ ದಾಖಲು ದಾಖಲೆಗಳು ಇಲ್ಲವಂತೆ..!!.

ಜೆಸ್ಕಾಂ ಇಲಾಖೆಯಲ್ಲಿ ನಿಲ್ಲದ ಭ್ರಷ್ಟಾಚಾರ!! ಕಮರ್ಷಿಯಲ್ ಮಳಿಗೆಗಳಿಗೆ ಅಳವಡಿಸಿದ್ದ 35 ವಿದ್ಯುತ್ ಮೀಟರ್ ಗಳು ತೆರುವು. ಪ್ರಕರಣ ದಾಖಲು ದಾಖಲೆಗಳು ಇಲ್ಲವಂತೆ..!!.

ಜೆಸ್ಕಾಂ ಇಲಾಖೆಯಲ್ಲಿ ನಿಲ್ಲದ ಭ್ರಷ್ಟಾಚಾರ!! ಕಮರ್ಷಿಯಲ್ ಮಳಿಗೆಗಳಿಗೆ ಅಳವಡಿಸಿದ್ದ 35 ವಿದ್ಯುತ್ ಮೀಟರ್ ಗಳು ತೆರುವು. ಪ್ರಕರಣ ದಾಖಲು ದಾಖಲೆಗಳು ಇಲ್ಲವಂತೆ..!!.

ಬಳ್ಳಾರಿ(23) ಜೆಸ್ಕಾಂ ಇಲಾಖೆಯಲ್ಲಿ ಕರ್ಮಕಾಂಡ ನಿಲ್ಲುವಂತೆ ಕಾಣುತ್ತಾ ಇಲ್ಲ ಅಧಿಕಾರಿಗಳು ನಿರ್ಲಕ್ಷ್ಯತೆ ಕಳಪೆ ಕಾಮಗಾರಿಗಳು ಆದೇಶಗಳು ಉಲ್ಲಂಘನೆಗಳು ಅಪಘಾತಗಳು ಒಂದಾದ ಮೇಲೆ ಒಂದು ಸರಣಿಯಾಗಿ ನಡೆಯುತ್ತಲೆ ಇದ್ದಾವೆ.

ಬಳ್ಳಾರಿ ಜಿಲ್ಲೆಯ ಜೆಸ್ಕಾಂ ಇಲಾಖೆಯಲ್ಲಿ ಸೆಕ್ಷನ್ ಆಫೀಸರ್ ಗಳದಿಂದ ಹಿಡಿದು ಇ,ಇ,ಗಳ ವರೆಗೆ ಬಹಿರಂಗ ಭ್ರಷ್ಟಾಚಾರ ನಡೆಯುತ್ತಲೇ ಇದೆ ಮೇಲಿನ ಅಧಿಕಾರಿಗಳು ಕೂಡ ಇವರಗಳನ್ನು ನಿಯಂತ್ರಿಸಲು ಚಾಲೆಂಜಾಗಿ ಉಳಿದುಕೊಂಡಿದೆ. ಒಂದಲ್ಲ ಒಂದು ರೀತಿಯಲ್ಲಿ ಬಳ್ಳಾರಿ ಜಸ್ಕಾಂ ಇಲಾಖೆ ಭ್ರಷ್ಟಾಚಾರ ಕೇಂದ್ರ ಸ್ಥಾನ ಆಗಿದೆ.
ಬಳ್ಳಾರಿ ನಗರದ ಜುಮ್ಮ ಮಸೀದ್ ಹುವ್ವಿನ ಬಜಾರ್ ಹತ್ತಿರದಲ್ಲಿ ಮೋತಿ ಕಾಂಪ್ಲೆಕ್ಸ್ ಅನ್ನುವ ಕಮರ್ಷಿಯಲ್ ಕಾಂಪ್ಲೆಕ್ಸ್ ಗೆ ಹತ್ತು ದಿನದ ಹಿಂದೆ ವಿದ್ಯುತ್ ಗುತ್ತಿಗೆದಾರರೊಬ್ಬರು 35 ವಿದ್ಯುತ್ ಮೀಟರ್ ಗಳನ್ನು ಸರ್ಕಾರದ ಮಾನದಂಡಗಳಂತೆ ಎಲ್ಲಾ ದಾಖಲಾತಿಗಳನ್ನು ನೀಡಿ ಅನುಮತಿ ಪಡೆದು ಮೀಟರ್ ಗಳನ್ನು ಅಳವಡಿಸಿದ್ದರು . ಐ.ಡಿ ನಂಬರ್ ಕೂಡ ಹಾಕಲಾಗಿತ್ತು.
ಆಭಾಗದ ಸೆಕ್ಷಣಾಧಿಕಾರಿಯಾಗಿರುವ ಸಂಜಯ್ ಅವರು ಕೂಡ ಪ್ರದೇಶವನ್ನು ವೀಕ್ಷಣೆ ಮಾಡಿ ಅನುಮತಿ ನೀಡಿದರು ಆದರೆ ಕೆಲ ದಿನಗಳ ಹಿಂದೆ ಅದೇ ಸೆಕ್ಷನ್ ಆಫೀಸರ್ ಆಗಿರುವ ಸಂಜಯ್ ಅವರು 35 ಮೀಟರ್ ಗಳು ಅನಧಿಕೃತ ಮೀಟರು ಗಳೆಂದು ಇವುಗಳಿಗೆ ಯಾವುದೇ ಅನುಮತಿ ಇಲ್ಲವೆಂದು ತಕ್ಷಣವೇ ವಿಜಲೆನ್ಸ್ ಅಧಿಕಾರಿಗಳನ್ನು ಕರೆಸಿ ಪ್ರಕರಣ ದಾಖಲೆ ಮಾಡಿ 35 ಮೀಟರ್ಗಳನ್ನು ತೆರುವು ಮಾಡಿ ವಿದ್ಯುತ್ ಸಂಪರ್ಕ ಇಲ್ಲದೆ ಮಾಡಿರೋದು ಆಶ್ಚರ್ಯ ಸಂಗತಿಯಾಗಿದೆ.

•ಪ್ರಕರಣ ಏನು :- ಮೂರ್ತಿ ಕಾಂಪ್ಲೆಕ್ಸ್ಗೆ ಅಳವಡಿಸಿದ ವಿದ್ಯುತ್ ಮೀಟರ್ ಗಳು ಆರಂಭದಿಂದ ಪ್ರತಿಯೊಂದು ಸರ್ಕಾರದ ದಾಖಲಾತಿಯಂತೆ ಆದೇಶ ಪಡೆದು ಜಸ್ಕಾಂ ಇಲಾಖೆಯಲ್ಲಿ ವಿದ್ಯುತ್ ಸಂಪರ್ಕ ಅನಂತ ಪಡೆದು ಮೀಟರುಗಳನ್ನು ಖರೀದಿ ಮಾಡಿ ಅಳವಡಿಸಲಾಗಿತ್ತು ಆದರೆ ಇತ್ತೀಚಿಗೆ ಸುಪ್ರೀಂ ಕೋರ್ಟ್ ಆದೇಶಗಳನ್ನು ನೀಡಿತ್ತು ಒಸಿ.ಸಿಸಿ. ಇರುವ ಕಮರ್ಷಿಯಲ್ ಕಾಂಪ್ಲೆಕ್ಸ್ ಗಳಿಗೆ ವಿದ್ಯುತ್ ಸಂಪರ್ಕ ಸಂಪರ್ಕವನ್ನು ನೀಡಬೇಕು ಅನ್ನುವ ಆದೇಶ ಇದೆ ಆದರೆ ನಗರದ ನಡಭಾಗದಲ್ಲಿರುವ ಈ ಕಾಂಪ್ಲೆಕ್ಸ್ಗೆ ಸಂಬಂಧಿತ ಅಧಿಕಾರಿಗಳೇ ಡೊಮೆಸ್ಟಿಕ್ ಅಡಿಯಲ್ಲಿ L.T. 1.L.T. 2. ತಾರೀಫ್ ಅಡಿಯಲ್ಲಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿ ಆದೇಶ ನೀಡಿದ್ದಾರೆ ಆದರೆ ಇದು ಮಹಾ ಅಪರಾಧವೆಂದು ತಿಳಿದುಕೊಡ ಕಮರ್ಷಿಯಲ್ ಕಾಂಪ್ಲೆಕ್ಸ್ ಗೆ ಈ ತಾರೀಫ್ ಅಡಿಯಲ್ಲಿ ಸಂಪರ್ಕ ನೀಡಬಾರದು ಇದಕ್ಕೆ.L. T. 3 ತಾರೀಫ್ ಅಡಿಯಲ್ಲಿ ಕೊಡಬೇಕು ಕಡಿಮೆ ತಾರಿಫ್ ಅಡಿಯಲ್ಲಿ ಸಂಪರ್ಕ ನೀಡಿ ಸರ್ಕಾರಕ್ಕೆ ಬರ್ತಕ್ಕಂತಹ ಆದಾಯವನ್ನು ಕಡಿತ ಗೊಳಿಸಿ, ಸಂಬಂಧಿತ ಅಧಿಕಾರಿಗಳು ವ್ಯವಸ್ಥೆಯನ್ನು ದಾರಿ ಪಡಿಸಿ ಭ್ರಷ್ಟಾಚಾರ ಮಾಡಿ ಹಣ ಗಳಿಸುವ ಇದೊಂದು ಮಹಾಪರಾಧವೆಂದು ಪರಿಗಣಿಸಲಾಗುತ್ತದೆ. ಇಲಾಖೆಯಲ್ಲಿ ಯಾವುದೇ ಸಣ್ಣ ಕಾಮಗಾರಿ ಮಾಡಲು ಮೀಟರ್ ಅಳವಡಿಸಲು ಸಂಬಂಧಿತ ಎಸ್ ಓ ಎ ಡಬ್ಲ್ಯೂ ಇನ್ನು ಮುಂತಾದ ಅಧಿಕಾರಿಗಳು ಸಂಪೂರ್ಣವಾಗಿ ಪರಿಶೀಲನೆ ಮಾಡುತ್ತಾರೆ ಆದರೆ ಮೂವತ್ತೈದು ಮೀಟರ್ ಗಳಿಗೆ ಅನುಮತಿ ನೀಡುವ ಮುನ್ನವೇ, ಹಣಕಾಸಿನ ವ್ಯವಹಾರದಲ್ಲಿ (ಭ್ರಷ್ಟಾಚಾರ) ವ್ಯತ್ಯಾಸ ಅಗಿದ್ದು, ಎಂಜಲಿ ಕಾಸು ದೊಡ್ಡ ಮಟ್ಟದಲ್ಲಿ ಸಿಗದ ಕಾರಣ ಮೀಟರ್ಗಳನ್ನು ತೆರುವು ಗೊಳಿಸಿ ಗ್ರಹಕರಿಗೆ ವಿನಾ ಕಾರಣ ತೊಂದರೆ ಮಾಡಿದ್ದಾರೆ ಅನ್ನೋದು ಮೇಲೆ ನೋಟಕ್ಕೆ ಕಾಣುತ್ತೆ.

ಈಗಾಗಲೇ ಗ್ರಹಕರು ಮೂರು ಲಕ್ಷ ಮೇಲ್ಪಟ್ಟು ಹಣವನ್ನು ನೀಡಿ ವಿದ್ಯುತ್ ಸಂಪರ್ಕವನ್ನು ಪಡೆದಿದ್ದಾರೆ.

ಸಂಬಂಧಿತ SO ಸಂಜಯ್ ಈ ವಿಚಾರವನ್ನು ಮೇಲಿನ ಅಧಿಕಾರಿಗಳ ಗಮನಕ್ಕೆ, ತಿಳಿಸದೆ ಏಕಾಏಕಿ ವಿಜಲೆನ್ಸ್ ಪ್ರಕಾರಣ ದಾಖಲೆ ಮಾಡಿದ್ದು 35 ಮೀಟರ್ಗಳಿಗೆ 5.5ಲಕ್ಷ ದವರೆಗೆ ದಂಡ ಹಾಕಲಾಗಿದೆ. ಯಾವನೋ ಮುಟ್ಟಾಳ ನ ಮಾತು ಕೇಳಿ ಪ್ರಕರಣ ಮಾಡಿ ಮಂಗ ನಾಗಿ ಮನೆಗೆ ಹೋಗಬೇಕು ಆಗಿದೆ. ವಿಜಿಲೆನ್ಸ್ ಪ್ರಕರಣದಲ್ಲಿ ಕೂಡ ಅಲ್ಲಿಯಾ AEE, ಸಹಿ ಇಲ್ಲದೆ ಸಂಜಯ್ ಮಾಡಿದ್ದಾರೆ,ಇದು ಕೂಡ ಅನುಮಾನ ಮೂಡಿಸಿದೆ.ಈ ಪ್ರಕರಣದಲ್ಲಿ ಕೆಲ ಜೆಸ್ಕಾಂ ಅಧಿಕಾರಿಗಳ ನೆರಳು ಇರಬೇಕು.. ಘಟನೆ ನಡೆದ ವಾರ ಆಗಿದೆ ಇಷ್ಟು ವರೆಗೆ ಯಾವದೇ ಕ್ರಮ ಆಗಿಲ್ಲ. ರಾಜಕಾರಣಿಗಳ ಸುತ್ತಾ ಅಲೆದಾಟ ಆಗುತ್ತಾ ಇದೇ. ನಗರದಲ್ಲಿ ಇದೇ ರೇತಿ ಕಮರ್ಷಿಯಲ್ ಕಾಂಪ್ಲೆಕ್ಸ್ ಗಳಿಗೆ ಡೊಮೆಸ್ಟಿಕ್ ನೀಡಿ ಸರ್ಕಾರಕ್ಕೆ ಅಪಾರ ನಷ್ಟ ಮಾಡಿರೋದು ಈ ಪ್ರಕರಣದಿಂದಲೇ ಬಹಿರಂಗ ಆಗಿದೆ.

ಜಿಲ್ಲೆ ಮತ್ತು ನಗರದಲ್ಲಿ ಬಹುತೇಕ ಕಾಂಪ್ಲೆಕ್ಸ್ ಗಳಿಗೆ ಭ್ರಷ್ಟಾಚಾರ ವಸಿಗಿ ಹಣಗಳಿಕೆ ಮಾಡಿದ್ದಾರೆ ಅನ್ನೋದು ಕೇಳಿಬರುತ್ತಿದೆ . ಅಧಿಕಾರಿಗಳು ಯಾವ ಕ್ರಮ ಮಾಡಲಿದ್ದಾರೆ ಭ್ರಷ್ಟಾಚಾರ ನಿಯಂತ್ರಣ ಆಗಬಹುದಾ ಅನ್ನೋದು ಕಾದು ನೋಡಬೇಕು 35 ಮೀಟರ್ ಗಳ ಪ್ರಕರಣದಲ್ಲಿ ಯಾರು ಮೇಲೆ ಕ್ರಮ ಆಗುತ್ತೆ ಎಂದು ಕಾದು ನೋಡಬೇಕು. ಆದರೇ ಇದರಲ್ಲಿ ಒಂದು ಟ್ವಿಸ್ಟ್ ಇದೇ. 35 ಮೀಟರ್ ಗಳ ಧಾಖಲೆ ಗಳು ಇಲ್ಲ, SO ಸಂಜಯ್ ಸಹಿ ಮಾಡಿಲ್ಲ ಅನ್ನುತ್ತಾರೆ ಆದರೇ ಕಚೇರಿನಲ್ಲಿ ಎಲ್ಲಾ ದಾಖಲೆ ಇದ್ದಾವೆ ಸಿಸ್ಟಮ್ ನಲ್ಲಿ ಎಂಟ್ರಿ ಆಗಿದೆ ಆದರೇ ಫೀಲ್ಡ್ ರಿಪೋರ್ಟ್ ಇಲ್ಲ ಎಂದು, ಸಂಜಯ್ ವಾದ ಇದೇ, ಆದರೇ ಯಾರು ಕಳ್ಳರು.. ಸಹಿ ನಕೀಲಿ ಆಗಿರಬಹುದಾ??.ವಿಜೇಲೆನ್ಸ್, ಅಧಿಕಾರಿಗಳು ಇವರಗೆ, ಆರೋಪಿತರುಗೆ ನೋಟೀಸ್ ಕೊಟ್ಟಿಲ್ಲ, MLA, ಫೋನ್ ಬರುತ್ತೆ,ಮತ್ತೊಂದು ಫೋನ್ ಬರುತ್ತೆ, ಎಂದು ಬಗೆಲು ತೆರದು ಕೂತು ಕೊಂಡಿದ್ದಾರೆ ಅಂದರೇ ಏನು ಮರ್ಮ, ದಂಡ ಯಾರು ಕಟ್ಟಬೇಕು, ಮಾಲೀಕರ ಅಥವಾ SO, ಗುತ್ತೆದಾರ ರಾಜಕಾರಣಿ ಗಳ..?ಗುತ್ತೆ ದಾರ ಶಿವು, ಗುತ್ತೆ ದಾರರ ಸಂಘದ ಅಧ್ಯಕ್ಷ ಜಗನ್, SO ಸಂಜಯ್, AEE, ನೂರಜ್ಜನ್ ಅವರು ಕಚೇರಿ ಯಲ್ಲಿ ಕೂತು ನಡೆಸಿದ ಮೀಟಿಂಗ್ ನೋಡಿ, ಅಸಲಿ ಕಥೆ ಮುಂದೆ..


News 9 Today

Leave a Reply